ಗೆಳೆಯರ ಬಳಗ ರಿ. ಕ್ರೀಡಾ ಸಂಘ, ಕಳ್ತೂರು ಸಂತೆಕಟ್ಟೆ ಇದರ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ:01-02-2025 ರಂದು ಗೆಳಯರ ಬಳಗ (ರಿ) ಕ್ರೀಡಾ ಸಂಘದ ಅಧ್ಯಕ್ಷರಾದ ಚಂದ್ರ ಕಳ್ತೂರು ಇವರ ಅಧ್ಯಕ್ಷತೆಯಲ್ಲಿ ಕಳ್ತೂರು ಬುಕ್ಕಿಗುಡ್ಡೆ ಕೊರಗರ ಹಾಡಿಯಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು.
ಮಾನ್ಯ ಶಾಸಕರ ಅನುಪಸ್ಥಿತಿಯಲ್ಲಿ 38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನವೀನ್ ಪೂಜಾರಿ ಇವರು ಉದ್ಘಾಟನೆಯನ್ನು ನೆರವೇರಿಸಿದರು.
ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೊರಗರ ಆರೋಗ್ಯ ಪ್ರೇರಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುರೇಶ್ ಎಳಜಿತ್ ಹಾಗೂ ಸಮುದಾಯಾದ ಮಾದರಿ ಗುಂಪು ಆಗಿರುವ ಹಾಲಾಡಿ ಬತ್ತಗುಳಿ ಕೊರಗರ ಗುಂಪಿನ ಪರವಾಗಿ ಲೋಕೇಶ್ ಇವರನ್ನು ಸನ್ಮಾನಿಸಲಾಯಿತು. ಕಳ್ತೂರು ಗುಂಪಿನ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಶೈಕ್ಷಣಿಕ ಕಿರು ಪ್ರೋತ್ಸಾಹವನ್ನು ಹಾಗೂ ಶೈಕ್ಷಣಿಕ ಸಾಲಿನ ಪ್ರಮುಖ ಹಂತದಲ್ಲಿ ಉತ್ತೀರ್ಣರಾದ ಗುಂಪಿನ ಮಕ್ಕಳನ್ನು ಮತ್ತು 6 ವರ್ಷಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಮಕ್ಕಳಿಗೆ ಕಿರು ಉಡುಗೊರೆಯನ್ನು ಸುರೇಂದ್ರ ಕಳ್ತೂರು ಇವರ ಕೊಡುಗೆಯಲ್ಲಿ ನೀಡಿ ಅಭಿನಂದಿಸಲಾಯಿತು. ಅದೇ ರೀತಿ ಈ ಒಂದು ಕಾರ್ಯಕ್ರಮಕ್ಕಾಗಿ ಗುಂಪಿನ ಸದಸ್ಯರಿಗೆ ಆಯೋಜಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿಜೇತರಿಗೆ ಸುನಿಲ್ ಕೆಂಜೂರು ಇವರ ಕೊಡುಗೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಸತತ 6 ವರ್ಷಗಳ ಕಾಲ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡುತ್ತಾ ಬರುತ್ತಿರುವ ಚೀರು ಕೊಂ ದಿ.ಸಿದ್ದ ಕೊರಗ ಇವರ ಪರವಾಗಿ ಕರುಣಾಕರ ಇವರನ್ನು ಕೂಡ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಕಳ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಉಷಾ ಪೂಜಾರಿ, ನಾಗೇಶ ನಾಯ್ಕ, ಕೊರಗ ಅಭಿೃವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಕೇರಳ ಇದರ ಅಧ್ಯಕ್ಷರಾದ ಸುಶೀಲ ನಾಡ, ಮಾಜಿ ತಾಲೂಕು ಸದಸ್ಯರು ಮತ್ತು ರೈತರ ಸೇವಾ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕರು ಆಗಿರುವ ಡಾ.ಸುನೀತಾ ಶೆಟ್ಟಿ,ಗೆಳೆಯರ ಬಳಗ ತಂಡದ ಗೌರವ ಸಲಹೆಗಾರರಾದ ಸತೀಶ್ ಪೆರ್ಡೂರು, ಗೆಳೆಯರ ಬಳಗ ತಂಡದ ಗೌರವ ಅಧ್ಯಕ್ಷರಾದ ಪುತ್ರನ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.