Thursday, July 25, 2024
Homeಅಪಘಾತಗೂಗಲ್ ಮ್ಯಾಪ್ ನಿರ್ದೇಶನದಿಂದ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿದ ಪ್ರವಾಸಿಗರ ತಂಡ

ಗೂಗಲ್ ಮ್ಯಾಪ್ ನಿರ್ದೇಶನದಿಂದ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿದ ಪ್ರವಾಸಿಗರ ತಂಡ

ಕೊಟ್ಟಾಯಂ: ಗೂಗಲ್ ಮ್ಯಾಪ್ ಬಳಸಿ ಸಾಗುತ್ತಿದ್ದ ಹೈದರಾಬಾದ್‌ನ ಪ್ರವಾಸಿಗರ ತಂಡವೊಂದರ ಕಾರು ಕೇರಳದ ಪ್ರವಾಹದ ಕೊಟ್ಟಾಯಂ ಜಿಲ್ಲೆಯ ಕುರುಪ್ಪಂತರ ಎಂಬಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಪ್ರಸಂಗವೊಂದು ಶುಕ್ರವಾರ ರಾತ್ರಿ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸದೆ ಒಬ್ಬ ಮಹಿಳೆ ಸಹಿತ ಇದ್ದ ನಾಲ್ಕು ಜನರ ತಂಡವನ್ನು ರಕ್ಷಿಸಲಾಗಿದೆ ಪೊಲೀಸರು ಎಂದು ಶನಿವಾರ ತಿಳಿಸಿದ್ದಾರೆ. ಪ್ರವಾಸಿಗರು ಅಲಪ್ಪುಳಕ್ಕೆ ತೆರಳುತ್ತಿದ್ದಾಗ ಈ ವಿಲಕ್ಷಣ ಘಟನೆ ನಡೆದಿದೆ. ಕಾರು ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಮಳೆಯಿಂದಾಗಿ ತೊರೆಯ ನೀರು ಉಕ್ಕಿ ಹರಿಯುತ್ತಿತ್ತು. ಆದರೆ ಗೂಗಲ್ ಮ್ಯಾಪ್ ನೆರವಿನಿಂದ ಸಾಗುತ್ತಿದ್ದುದರಿಂದ ಅದನ್ನೇ ನಂಬಿಕೊಂಡು ಮುಂದುವರಿದಾಗ ತೊರೆಯನ್ನು ಪ್ರವೇಶಿಸಿ ಕಾರು ಬಹುತೇಕ ಮುಳುಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಪ್ರದೇಶದ ಪರಿಚಯ ಇಲ್ಲದಿದ್ದರಿಂದ ಗೂಗಲ್ ಮ್ಯಾಪ್ ನೆರವನ್ನು ನೆಚ್ಚಿಕೊಂಡಿದ್ದ ಅವರು ವಾಹನವನ್ನು ನೇರವಾಗಿ ತೊರೆಗೆ ಚಲಾಯಿಸಿಕೊಂಡು ಹೋದರು ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular