ಬಹ್ರೈನ್ :2025 ಡಿಸೆಂಬರ್ 5 ಮತ್ತು 6 ರಂದು ನಡೆದ ನಿಸರ್ಗ ಅರ್ಪಿಸುವ ವೈ ಎಂ ಎಸ್ ಪ್ರೀಮಿಯರ್ ಲೀಗ್ ಸೀಸನ್-3 ಇದರ ವತಿಯಿಂದ ಸುಮಾರು 20000 ರೂಪಾಯಿ ಮೌಲ್ಯದ ಆಟದ ಸಾಮಗ್ರಿಗಳನ್ನು ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯ ಪ್ರಾಂಶುಪಾಲರಾದ ಭಾಸ್ಕರ್ ಎಂ , ದೈಹಿಕ ಶಿಕ್ಷಕರಾದ ದೇವೇಂದ್ರ ಶೆಟ್ಟಿ ಹಾಗು ವೈ ಎಂ ಸ್ ತಂಡದ ಮುಖ್ಯ ಆಯೋಜಕರಾದ ಮನೋಜ್ ಶೆಟ್ಟಿ ಶಿರ್ವ ಹಾಜರಿದ್ದರು.

ಅದೇ ರೀತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಯಬೆಟ್ಟು ಹಾಳೆಕಟ್ಟೆ ನಿಟ್ಟೆ ಗೆ ಸುಮಾರು 12000 ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶಾಂತಾ, ಶಾಲಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ್ ಕೋಟ್ಯಾನ್ ಶಿಕ್ಷಕರಾದ ಅನಂತ್ ದೇವಾಡಿಗ, ವೈ ಎಂ ಎಸ್ ತಂಡದ ಮುಖ್ಯ ಆಯೋಜಕರಾದ ಮನೋಜ್ ಶೆಟ್ಟಿ ಶಿರ್ವ, ಮಕ್ಕಳ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
