Saturday, April 26, 2025
Homeಮೂಡುಬಿದಿರೆಯುವವಾಹಿನಿ( ರಿ) ಮೂಡುಬಿದಿರೆ ಘಟಕದ ವತಿಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ...

ಯುವವಾಹಿನಿ( ರಿ) ಮೂಡುಬಿದಿರೆ ಘಟಕದ ವತಿಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ

ಯುವವಾಹಿನಿ( ರಿ) ಮೂಡುಬಿದಿರೆ ಘಟಕದ ವತಿಯಿಂದ ಮತ್ತು ಶ್ರೀಶ ಸೌಹಾರ್ದ ಸಹಕಾರಿ ಸಂಘ, ಜೆ.ಸಿ. ಐ. ಭಾರ್ಗವ ಮುಂಡ್ಕೂರು, ಬಿಲ್ಲವ ಸಂಘ ಕಡಂದಲೆ ಪಾಲಡ್ಕ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಾಲಡ್ಕ, ಶ್ರೀ ಸತ್ಯ ಸಾಯಿ ಬಾಲ ವಿಕಾಸ ಕೇಂದ್ರ ಮಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ಕಡಂದಲೆ , ಇವರ ಸಹಕಾರದೊಂದಿಗೆ ಮಂಗಳೂರು ಕೆ.ಎಂ. ಸಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರ ಸಹಕಾರದೊಂದಿಗೆ. ಮತ್ತು ದೇರಳಕಟ್ಟೆ ಏನೇಪೋಯ ದಂತ ವೈದ್ಯಕೀಯ ಆಸ್ಪತ್ರೆ ವೈದ್ಯರ ತಂಡದಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರವು ಬಿಲ್ಲವ ಸಂಘ ಕಡಂದಲೆ ಪಾಲಡ್ಕ ಇಲ್ಲಿ ನಡೆಯಿತು.

ಯುವವಾಹನಿ (ರಿ )ಮೂಡುಬಿದರೆ ಘಟಕದ ಅಧ್ಯಕ್ಷ ಶಂಕರ ಎ.ಕೋಟ್ಯಾನ್ ಇವರ ಅಧ್ಯಕ್ಷತೆ ವಹಿಸಿ. ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭಾ ವೇದಿಕೆಯಲ್ಲಿ ಬಿಲ್ಲವ ಸಂಘ ಪಾಲಡ್ಕ ಇದರ ಅಧ್ಯಕ್ಷರಾದ ಶ್ರೀ ಲೀಲಾದರ ಪೂಜಾರಿ, ಯುವವಾಹಿನಿ (ರಿ)ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಶ್ರೀ ಸುರೇಶ್, Visibility, ಶ್ರೀಷ ಸೌಹಾರ್ದ ಸಹಕಾರಿ ಸೊಸೈಟಿ ಮಂಗಳೂರು, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರೇರಣಾ , ಏನೆಪೋಯ ದಂತ ಚಿಕಿತ್ಸಾಲಯ ದೇರಳಕಟ್ಟೆ ಇದರ ಉಪನ್ಯಾಸಕರಾದ ಡಾ. ಅಲ್ಫಿಯಾ, ಎಮ್ ಎಸ್. ಗುರುರಾಜ್ ಅಧ್ಯಕ್ಷರು ಶ್ರೀಷ ಸೌಹಾರ್ದ ಕೊ ಆಪರೇಟಿವ್ ಸೊಸೈಟಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಾಲಡ್ಕ ಇದರ ಸಂಚಾಲಕರಾದ ಶಿವರಾಂ, ಆರೋಗ್ಯ ನಿರ್ದೇಶಕಿ ಅನಿತಾ ಮುಂದ್ರೋಟ್ಟು, ಶ್ರೀ ಭರತ್ ಸಂಪರ್ಕ ಅಧಿಕಾರಿ, ಏನೇ ಪೋಯಾ ಡೆಂಟಲ್ ಕಾಲೇಜ್ ಮಂಗಳೂರು ಇವರೆಲ್ಲರೂ ಉಪಸ್ಥಿತರಿದ್ದರು.

ಹಳ್ಳಿ ಪ್ರದೇಶದಲ್ಲಿ ಬಡ ಜನರಿಗೆ ಈ ಆರೋಗ್ಯ ತಪಾಸಣಾ ಶಿಬಿರದಿಂದ ಬಹಳಷ್ಟು ಪ್ರಯೋಜನವು ಸಿಗಲಿದ್ದು ಯುವವಾಹಿನಿ ಹಾಗೂ ಇತರ ಸಂಸ್ಥೆಗಳು ಸೇರಿಕೊಂಡು ನಡೆಸುವ ಈ ಶಿಬಿರವು ಅತ್ಯುತ್ತಮ ಸಮಾಜ ಸೇವೆಯ ಭಾಗವಾಗಿದ್ದು ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಉದ್ಘಾಟಕರಾದ ಸುಚರಿತ ಶೆಟ್ಟಿ ಇವರು ತಿಳಿಸಿದರು.

ಯುವವಾಹಿನಿಯೊಂದಿಗೆ ಕೈಜೋಡಿಸಿ ಇಂದಿನ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಇತರ ಸಂಘ ಸಂಸ್ಥೆಗಳನ್ನು ಅಭಿನಂದಿಸಿ ಮಾತನಾಡಿದ ಅಧ್ಯಕ್ಷ ಶಂಕರ್ ಕೋಟ್ಯಾನ್ ಇವರು ಇವರಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ, ಮೂಡಬಿದ್ರೆಯಲ್ಲಿ ಒಂದು ಮಾದರಿ ಸಂಘಟನೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ತಿಳಿಸಿದರು.

ಹರಿಪ್ರಸಾದ್ ಪಿ. ಮಾಜಿ ಅಧ್ಯಕ್ಷರು ಯುವವಾಹಿನಿ( ರಿ ) ಮೂಡುಬಿದಿರೆ ಘಟಕ ಇವರು ಪ್ರಾಸ್ತಾವಿಕ ಮಾತನಾಡಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.

ಇಂದಿನ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 225 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 183 ಮಂದಿ ಜನರಲ್ ಚೆಕಪ್ ನಡೆಸಿ , 42 ಮಂದೆ ಉಚಿತ ದಂತ ಚಿಕಿತ್ಸೆ ನಡೆಸಿಕೊಂಡರು. ಒಟ್ಟು 43 ಮಂದಿ ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 63 ಮಂದಿ ರೋಗಿಗಳಿಗೆ ಉಚಿತ ಚಿಕಿತ್ಸೆ ನಡೆಸಿ ಉಚಿತ ಔಷದ ನೀಡಲಾಯಿತು.

ಯುವ ವಾಹಿನಿ (ರಿ )ಮೂಡಬಿದ್ರೆ ಘಟಕದ ಮಾಜಿ ಅಧ್ಯಕ್ಷರಾದ ನವಾನಂದ, ಪ್ರಥಮ ಉಪಾಧ್ಯಕ್ಷರಾದ ಮುರಳಿಧರ್ ಕೋಟ್ಯನ್, ಪ್ರಚಾರ ನಿರ್ದೇಶಕರಾದ ಆದರ್ಶ ಸುವರ್ಣ, ಸದಸ್ಯರಾದ ಉಮೇಶ್ ಕೋಟ್ಯಾನ್, ಜೀವಿತ ಶಂಕರ್, ಸಪ್ನ ಕೋಟ್ಯಾನ್, ಕು. ಅನುಪ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular