ಉತ್ತರಪ್ರದೇಶ: ಪುರುಷನೊಬ್ಬ ತನ್ನ ಮೊದಲ ಪತ್ನಿ ಜೀವಂತವಾಗಿರುವಾಗಲೇ ಆಕೆಗೆ ಶ್ರಾದ್ಧ ಮಾಡಿದ್ದಾನೆ. ಬಳಿಕ ತನ್ನ ಪ್ರಿಯತಮೆಗೆ ತನ್ನ ಪತ್ನಿ ಸತ್ತಿರುವುದಾಗಿ ಹೇಳಿ ಮದುವೆಯಾಗಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಆತನ ಮೊದಲ ಪತ್ನಿ ತನ್ನ ತವರು ಮನೆಯಿಂದ ಓಡೋಡಿ ಬಂದು ತಾಳಗ್ರಾಮ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾನೆ. ಈ ಘಟನೆ ಉತ್ತರಪ್ರದೇಶದ ಕನೌಜ್‌ನಲ್ಲಿ ನಡೆದಿದೆ.
ಪತ್ನಿ ಬದುಕಿರುವಾಗಲೇ ಶ್ರಾದ್ಧ ಕಾರ್ಯಕ್ರಮ ಮಾಡಿರುವ ವ್ಯಕ್ತಿಯನ್ನು ಪವನ್ ಪಟೇಲ್ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಪವನ್ ಪಟೇಲ್ ಬಂಧನಕ್ಕೆ ಸಜ್ಜಾಗಿದ್ದಾರೆ. ಇತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಪವನ್ ಪಟೇಲ್ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಮದುವೆಯಾದ ಮೇಲೂ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪವನ್ ಪಟೇಲ್,ಸಾಕಷ್ಟು ದಿನಗಳಿಂದ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಇದಲ್ಲದೇ ಇಬ್ಬರು ಮಕ್ಕಳನ್ನು ಆಕೆಯಿಂದ ದೂರ ಮಾಡಿದ್ದ. ಇದರಿಂದ ನೊಂದಿದ್ದ ಪತ್ನಿ ತವರು ಮನೆಗೆ ಹೋಗಿದ್ದಾಳೆ. ಇದನ್ನೇ ಒಳ್ಳೆ ಸಮಯ ಎಂದುಕೊಂಡು ಆಕೆ ಬದುಕಿರುವಾಗಲೇ ಶ್ರಾದ್ಧ ಕಾರ್ಯಕ್ರಮ ಮಾಡಿ ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ.