ಅಹಮದಾಬಾದ್: ಜೈನ ಸಂಪ್ರದಾಯದ ಪ್ರಕಾರ ಸನ್ಯಾಸತ್ವ ಸ್ವೀಕಾರ ಮಾಡಲೆಂದು ಗುಜರಾತ್ ಮೂಲದ ಉದ್ಯಮಿ ದಂಪತಿ ತಮ್ಮ ಇನ್ನೂರು ಕೋಟಿ ರೂ ಮೌಲ್ಯದ ಆಸ್ತಿ ದಾನ ಮಾಡಿದ್ದಾರೆ. ಗುಜರಾತ್ ನ ಸಬರಕಾಂತದಲ್ಲಿ ಮೆರವಣಿಗೆ ನಡೆಸಿ ತಮ್ಮ ಎಲ್ಲಾ ವಸ್ತುಗಳನ್ನು ದಾನ ಮಾಡಿದ್ದಾರೆ. ಉದ್ಯಮಿ ಭವೇಶ್ ಬಂಡಾರಿ ಮತ್ತು ಅವರ ಪತ್ನಿ ತಮ್ಮ ಸಂಪೂರ್ಣ ಆಸ್ತಿ ದಾನ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ದಂಪತಿ ತಮ್ಮ ಸಂಪೂರ್ಣ ಆಸ್ತಿ ದಾನ ಮಾಡಿ, ಏಪ್ರಿಲ್ ಕೊನೆಯಲ್ಲಿ ಸನ್ಯಾಸತ್ವ ಸ್ವೀಕರಿಸುವ ಬಗ್ಗೆ ಘೋಷಿಸಿದ್ದರು. ದಂಪತಿಯ 9 ವರ್ಷದ ಮಗಳು ಮತ್ತು 16 ವರ್ಷದ ಮಗ ಎರಡು ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಕುರಿತ ಮೆರವಣಿಗೆಯ ದೃಶ್ಯವುಳ್ಳ ವಿಡಿಯೋ ವೈರಲ್ ಆಗಿದೆ.