Tuesday, December 3, 2024
HomeUncategorizedಮನುಷ್ಯನು ಆರೋಗ್ಯವಂತನಾಗಿರಬೇಕಾದರೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಸ್ಥ್ಯವನ್ನು ಹೊಂದಿರಬೇಕು - ಡಾ! ಸುಜಯ್ ಭಂಡಾರಿ.

ಮನುಷ್ಯನು ಆರೋಗ್ಯವಂತನಾಗಿರಬೇಕಾದರೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಸ್ಥ್ಯವನ್ನು ಹೊಂದಿರಬೇಕು – ಡಾ! ಸುಜಯ್ ಭಂಡಾರಿ.

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು,
ಇದರ ಆಶ್ರಯದಲ್ಲಿ ಹಾಗೂ ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ(ರಿ), ಜಿ. ಎಮ್. ಸ್ಪೋರ್ಟ್ಸ್ ಕ್ಲಬ್(ರಿ), ಸಂಗಮ್ ಫ್ರೆಂಡ್ಸ್ ಕ್ಲಬ್(ರಿ),ಜಪ್ಪಿನ ಮೊಗರು, ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ.
ಇವರ ಸಹಯೋಗದೊಂದಿಗೆ ದಿನಾಂಕ:27/11/2024,ಬುಧವಾರ ಸಮಯ:ಸಂಜೆ 6:00ರಿಂದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜನಜಾಗೃತಿ ಹಾಗೂ ಮಾದಕ ವ್ಯಸನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ(ರಿ) ಜಪ್ಪಿನಮೊಗರು ಇಲ್ಲಿನ ಸಭಾಂಗಣದಲ್ಲಿ ನಡೆಯಿತು.

▪ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ವೈದ್ಯಾಧಿಕಾರಿ ಡಾ!ಸುಜಯ್ ಭಂಡಾರಿಯವರು ಮಾದಕ ದ್ರವ್ಯಗಳ ವ್ಯಸನಿಯು ತನ್ನ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಾನೆ ಎಂದು ಮಾತನಾಡಿದರು.

▪ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ವೈದ್ಯಾಧಿಕಾರಿ ಡಾ! ಎಚ್.ಆರ್. ತಿಮ್ಮಯ್ಯರವರು ವಹಿಸಿದ್ದರು.

▪ಮತ್ತೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕರಾವಳಿ ಕಾವಲು ಪಡೆಯ ಪೋಲಿಸ್ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ಅವರು ಮಾದಕ ವ್ಯಸನದಲ್ಲಿ ಸಮಾಜದ ಜನರು ಸೇರಿ ಕೊಂಡರೆ ನಂತರ ಏನೆಲ್ಲಾ ದುಷ್ಪರಿಣಾಮ ಆಗುತ್ತೆ ಎಂದು ನೆರೆದಿದ್ದ ನಾಗರಿಕರಿಗೆ ಸ್ವವಿಸ್ತಾರವಾಗಿ ಮಾತನಾಡಿದರು.

ನೆಹರು ಯುವಕೇಂದ್ರ ಮಂಗಳೂರು ಇಲ್ಲಿನ ಅಧಿಕಾರಿ ಶ್ರೀ ಜಗದೀಶ್.ಕೆ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದರು.

ವೇದಿಕೆಯಲ್ಲಿ ಶ್ರೀ ಸುಧಾಕರ್.ಜಿ, ಶ್ರೀ ಎಮ್. ದಿವಾಕರ್, ಶ್ರೀ ದೀಪಕ್ ಸುವರ್ಣ,ಶ್ರೀ.ಎ.ಜನಾರ್ಧನ್,ಶ್ರೀ ದಿನಕರ್ ಕುಲಾಲ್,ಶ್ರೀ ಮುರಳೀಕೃಷ್ಣ,ಉಪಸ್ಥಿತರಿದ್ದರು.

ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಈ ಕಾರ್ಯ್ರಮದಲ್ಲಿ ಪದಾಧಿಕಾರಿಗಳು,ಸದಸ್ಯರು ಹಾಗೂ ಮತ್ತಿತರರು ಪಾಲ್ಗೊಂಡರು.▪ಜಿ.ಎಮ್.ಸ್ಪೋಟ್ಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.

ಸಂಗಮ್ ಫ್ರೆಂಡ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಶ್ರೀ ಶ್ರೀನಿವಾಸ.ಕೆ.ವಂದಿಸಿದರು.ಶ್ರೀ ಕೃಷ್ಣ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular