ಬ್ರೆಸಿಲಿಯಾ ಸಮೀಪವಿರುವ ಸಮಂಬಾಯಾದಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ದನದ ಕೊಟ್ಟಿಗೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದಾರೆ.. ಇದಲ್ಲದೆ, ಆ ವ್ಯಕ್ತಿ ತನ್ನ ಜನನಾಂಗದ ಮೇಲೆ ಕಾಂಡೋಮ್ ಅನ್ನು ಧರಿಸಿದ್ದು, ಕಾಂಡೋಮ್ ಹರಿದು ಬಿದ್ದ ದೃಶ್ಯ ಕಂಡು ಬಂದಿದೆ..
ಈ ವಿಚಿತ್ರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ವಿವಿಧ ಚಕಿತಗೊಳಿಸುವ ಮಾಹಿತಿಗಳು ಸಿಕ್ಕಿವೆ.
ಗ್ರಾಮೀಣ ಪ್ರದೇಶವಾದ ಲಾಜೆ ಡಾ ಜಿಬೋಯಾದಲ್ಲಿನ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವ್ಯಕ್ತಿಯೊಬ್ಬ ವಾಸಿಸುತ್ತಿದ್ದ. ಈ ವಿಚಿತ್ರ ಘಟನೆ ಕಳೆದ ಬುಧವಾರ (ಜ. 8) ನಡೆದಿದೆ ಎನ್ನಲಾಗಿದೆ. ಮೃತ ವ್ಯಕ್ತಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಜಮೀನಿನಲ್ಲಿ ಹಸುಗಳಿಗೆ ಹಾಲುಣಿಸಲು ಮತ್ತು ಹಾಲು ಕರೆಯುತ್ತಿದ್ದ. ಬೆಳಗಿನ ಜಾವ ಇದೇ ಅವನ ದಿನಚರಿಯಾಗಿತ್ತು. ಘಟನೆಯ ಹಿಂದಿನ ರಾತ್ರಿ ವ್ಯಕ್ತಿ ಮತ್ತು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬರ ಒಟ್ಟಿಗೆ ಮದ್ಯ ಸೇವಿಸಿದ್ದರು.
ಆ ಮೂಲಕ ಘಟನೆ ನಡೆದ ದಿನ ಬೆಳಗ್ಗೆ 5 ಗಂಟೆಗೆ ಕುಡಿದ ಅಮಲಿನಲ್ಲಿ ಎದ್ದು ಹಾಲು ಹಾಕಲು ಹೋಗಿದ್ದು, ಬಹಳ ಹೊತ್ತಾದರೂ ಹಾಲು ತರದ ಹಿನ್ನೆಲೆಯಲ್ಲಿ ಮತ್ತೊಬ್ಬ ಕಾರ್ಮಿಕ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿ ಜನನಾಂಗದ ಮೇಲೆ ಕಾಂಡೋಮ್ ಕಂಡಿತು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಇದಲ್ಲದೆ, ತನಿಖೆಯ ಸಮಯದಲ್ಲಿ, ಹಸು ತಲೆಯ ಮೇಲೆ ತುಳಿದ ಕಾರಣದಿಂದ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಹಸುವಿನ ಜೊತೆ ಸಂಭೋಗಕ್ಕೆ ಯತ್ನಿಸಿದ ವ್ಯಕ್ತಿ ಹಸು ಒದ್ದು ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಹೇಳಲಾಗಿದೆ.