ದಾವಣಗೆರೆ: ಬಂಟರ ಸಂಘ ಮತ್ತು ದಾವಣಗೆರೆಯ ಕರಾವಳಿ ಮಿತ್ರ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ನಗರದ ಕುಂದುವಾಡ ರಸ್ತೆಯಲ್ಲಿರುವ ಡಾ ಶ್ಯಾಮಸುಂದರ ಶೆಟ್ಟಿ ಬಂಟರ ಭವನದ “ಕರಾವಳಿ ಸೌಧ” ಸಭಾಂಗಣದಲ್ಲಿ ಆಧ್ಯಾತ್ಮ ಪರಂಪರೆಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಯಾವುದೇ ಜಾತಿ, ಮತ, ಬೇಧವಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತರಾದ ನಾಗರಾಜ್ ಭಟ್ ಮತ್ತು ತಂಡದಿಂದ ಅತ್ಯದ್ಭುತವಾಗಿ ವಿಜೃಂಭಣೆಯಿಂದ ಶಾಸ್ತ್ರೋಕ್ತವಾಗಿ ಯಶಸ್ವಿಯಾಯಿತು ಎಂದು ಕರಾವಳಿ ಮಿತ್ರ ಮಂಡಳಿಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಂಸದರಾದ ಡಾ ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ದಂಪತಿಗಳು, ಡಾ. ಅಥಣಿ ವೀರಣ್ಣ ದಂಪತಿಯರು, ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ದಂಪತಿಗಳು ಭಂಟರ ಭವನದ ಅಧ್ಯಕ್ಷರಾದ ಡಾ. ಪ್ರಭಾಕರ ಶೆಟ್ಟಿ ದಂಪತಿಯರು, ಪ್ರಧಾನ ಕಾರ್ಯದರ್ಶಿ ಆಡಿಟರ್ ಉಮೇಶ್ ಶೆಟ್ಟಿ ದಂಪತಿಯರು, ಡಾ ಸುರೇಂದ್ರ ಶೆಟ್ಟಿದಂಪತಿಯರು, ಡಾ ಸುಕುಲ ಶೆಟ್ಟಿ ದಂಪತಿಯರು, ಕರಾವಳಿ ಮಿತ್ರ ಮಂಡಳಿ ಮುಖ್ಯಸ್ಥರಾದ ಸವಿಡೈನ್ ಮಹೇಶ್ ಶೆಟ್ಟಿ ದಂಪತಿಯರು, ಅಂಕಿತ್ ಮೊಯಿಲಿ ದಂಪತಿಯರು, ಹರೀಶ್ ಶೆಟ್ಟಿ ದಂಪತಿಯರು, ಸತೀಶ್ ಮೊಯಿಲಿ ದಂಪತಿಯರು, ಯಕ್ಷಗಾನ ಕಲಾವಿದರಾದ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ದಂಪತಿಯರು, ಗೋಪಾಲ್ ಆಚಾರ್ ದಂಪತಿಯರು, ಅಣಬೇರು ರಾಜಣ್ಣ ದಂಪತಿಯರು, ಗಣೇಶ್ ಹುಲ್ಮನಿ ದಂಪತಿಯರು, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ ಕುಟುಂಬ, ನಾಗಭೂಷಣ್ ದಂಪತಿಯರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಸುರೇಂದ್ರ ಮೊಯ್ಲಿ ದಂಪತಿಯರು, ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.