ರಾಯಚೂರು: ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಆಕ್ರೋಶಿತನಾದ ಅರ್ಚಕನೊಬ್ಬ ಮುಸ್ಲಿಂ ಯುವಕನ ಕಣ್ಣು ಕಿತ್ತು, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾಯಚೂರಿನ ತುಗ್ಗಲದಿನ್ನಿಯಲ್ಲಿ ಈ ಘಟನೆ ನಡೆದಿದೆ.
28ರ ಹರೆಯದ ಖಾದರ್ ಬಾಷಾ ಕೊಲೆಯಾದಾತ. ಆಂಜನೇಯ ಗುಡಿಯ ಅರ್ಚಕ ಮಾರುತಿ ಕೊಲೆ ಆರೋಪಿಯಾಗಿದ್ದು, ಕೊಲೆ ಮಾಡಿದ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ. ಹತ್ಯೆಯಾದಾತ ಮತ್ತು ಹತ್ಯೆ ಮಾಡಿದಾತ ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳು. ತನ್ನ ಪತ್ನಿ ಮೇಲೆ ಖಾದರ್ ಕಣ್ಣು ಹಾಕಿದ್ದ ಎಂಬ ಸಂದೇಹ ಅರ್ಚಕ ಮಾರುತಿಗಿತ್ತು. ಖಾದರ್ ತನ್ನ ಪತ್ನಿಗೆ ಮೆಸೇಜ್ ಮಾಡಿದ್ದರಿಂದ ಆಕ್ರೋಶಗೊಂಡ ಮಾರುತಿ ಆತನ ಮೇಲೆ ಭೀಖರ ದಾಳಿ ಮಾಡಿದ್ದಾನೆ. ಖಾದರ್ ನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯ ನಂತರ ಮಾರುತಿ ತಾನೇ ಖುದ್ದಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹತ್ಯೆ ನಡೆದಿದೆ. ಕೃತ್ಯದಲ್ಲಿ 6-7 ಜನರು ಭಾಗಿಯಾಗಿರುವ ಬಗ್ಗೆ ಶಂಕಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖಾದರ್ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.