ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ವಿವೇಕ ನೈಪುಣ್ಯ” ಕಾರ್ಯಗಾರದ ಸಮಾರೋಪ ಸಮಾರಂಭ.
“ಶಿಕ್ಷಕನಾದವನು ತನ್ನ ವೃತ್ತಿಯನ್ನು ಮಾತ್ರ ಮಾಡದೆ ವಿದ್ಯಾರ್ಥಿಯ ಒಳಮನಸ್ಸನ್ನರಿತು ಅವರನ್ನು ಮುಂದಕೊಯ್ಯುವ ಕೆಲಸವನ್ನು ಮಾಡಬೇಕಾಗುತ್ತದೆ. ಮಕ್ಕಳ ಮಾನಸಿಕ ಆರೋಗ್ಯ ಶಿಕ್ಷಕರ ಬತ್ತಳಿಕೆಯಲ್ಲಿ ಹೊಸ ಅಸ್ತ್ರವಾಗಲಿ” ಎಂದು ಲೇಖಕರು ಹಾಗೂ ಖ್ಯಾತ ಮನೋ ವೈದ್ಯರಾದ ಡಾ .ವಿರೂಪಾಕ್ಷ ದೇವರಮನೆ ಅಭಿಪ್ರಾಯ ವ್ಯಕ್ತಪಡಿಸಿದರು . ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕುರಿತಂತೆ ಶಿಕ್ಷಕರಿಗಾಗಿ ನಡೆಸಿದ ʼವಿವೇಕ ನೈಪುಣ್ಯ ʼಕಾರ್ಯಗಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು . ಸಾವಿರ ಜನರು ಒಗ್ಗೂಡಿ ಮಾಡಲಾಗದ್ದನ್ನು ಒಬ್ಬ ಪ್ರಭಾವಿ ಹಾಗೂ ಸಂವೇದನಾ ಶೀಲ ಶಿಕ್ಷಕ ತನ್ನ ತರಗತಿ ಕೋಣೆಯ ಒಳಗೆ ವಿದ್ಯಾರ್ಥಿಗಳ ಮೂಲಕ ಹೇಗೆ ಮಾಡಬಲ್ಲ, ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವ, ಅವರ ಬದುಕಿನ ಕುರಿತು ಕಾಳಜಿ ವಹಿಸುವ ಶಿಕ್ಷಕ ತನ್ನ ಗಮನಿಸುವಿಕೆ, ಮಾತು ಹಾಗೂ ಕೃತಿಗಳ ಮೂಲಕ ವಿದ್ಯಾರ್ಥಿಗಳ ಆಲೋಚನಾ ಲಹರಿಯಲ್ಲಿ ಬದಲಾವಣೆಯನ್ನು ಹೇಗೆ ತರಬಲ್ಲ, ಮದ್ಯವ್ಯಸನಿಗಳ
ಮಕ್ಕಳ ಕುರಿತು ನಮ್ಮ ಶಿಕ್ಷಕ ಸಮೂಹ ಏನು ಮಾಡಬೇಕು ಎಂಬುದರ ಕುರಿತಾಗಿ ವಿವಿಧ ಅವಧಿಗಳಲ್ಲಿ ಉಪನ್ಯಾಸಕರಿಗೆ ಮಾಹಿತಿಯನ್ನು ನೀಡಿದರು . ಬಳಿಕ ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ .ಕೆ.ಎನ್.ಸುಬ್ರಹ್ಮಣ್ಯ ಅವರು ಸಮಾರೋಪದ ಮಾತುಗಳನ್ನಾಡುತ್ತಾ “ಹೊಸಯುಗದ ವಿದ್ಯಾರ್ಥಿಗಳನ್ನು ತಿದ್ದಿ-ತೀಡಲು ಬೇಕಾದ ತರಬೇತಿ ಇಂದಿನ ದಿನಗಳಲ್ಲಿ ತುಂಬಾ ಅವಶ್ಯ ಕತೆ ಇದೆ. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು .
ಕಾರ್ಯಗಾರದಲ್ಲಿ ಅಂಕಣಕಾರರು ಹಾಗೂ ಕವಯತ್ರಿ ಮಲ್ಲಿಕಾ ಜೆ.ರೈ , ಪ್ರಾಂಶುಪಾಲರಾದ ಮಹೇಶ್
ನಿಟಿಲಾಪು ರ, ಉಪಪ್ರಾಂಶುಪಾಲರಾದ ದೇವಿಚರಣ್ ರೈ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನು ಭೋಗ್, ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ
ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು
ಪಾಲ್ಗೊಂಡರು . ಉಪನ್ಯಾಸಕಿ ಯಶವಂತಿ ಡಿ. ಸ್ವಾಗತಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು .
ದೇವಿಚರಣ್ ರೈ ವಂದಿಸಿದರು .