ಮುಲ್ಕಿ : ಕಾರ್ನಾಡ್ ಶ್ರೀರಾಮ ಸೇವಾ ಮಂಡಳಿ ವತಿಯಿಂದ ವನಮಹೋತ್ಸದ ಪ್ರಯುಕ್ತ ಸಸಿ ನಡೆಯುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಂಡಳಿಯ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಮಾತಾನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯವಾಗಲಿ ಗಿಡಗಳನ್ನು ನಡೆಯುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.
ಮುಲ್ಕಿ ಭಂಟರ ಸಂಘದ ಅಧ್ಯಕ್ಷರು ಅಶೋಕ್ ಕುಮಾರ್ ಶೆಟ್ಟಿ, ವಿಶ್ವ ಹಿಂದೂ ಪರುಶತ್ತು ಶ್ಯಾಮ್ ಸುಂದರ್ ಶೆಟ್ಟಿ, ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷರಾದ ಸಂಪತ್ ಕುಮಾರ್, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಿಕಾಸ್ ಶೆಟ್ಟಿ, ರಾಜೇಶ್, ಕೀರ್ತನ್, ಜಯಂತ, ಜೆ. ಸಿ ಕಲ್ಲಪ್ಪ, ಶಿವಾನಂದ ಇವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.