Monday, July 15, 2024
Homeರಾಜ್ಯದಾವಣಗೆರೆ ಗೌಡ ಸಾರಸ್ವತ ಸಮಾಜದ ಸುವರ್ಣ ಮಹೋತ್ಸವದ ಕಿರು ಇತಿಹಾಸ

ದಾವಣಗೆರೆ ಗೌಡ ಸಾರಸ್ವತ ಸಮಾಜದ ಸುವರ್ಣ ಮಹೋತ್ಸವದ ಕಿರು ಇತಿಹಾಸ

ದಾವಣಗೆರೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ 1974ರಲ್ಲಿ ಒಗ್ಗೂಡುವಿಕೆಯೊಂದಿಗೆ ಸಮಾಜ ಬಾಂಧವರೆಲ್ಲರೂ ನಮ್ಮ ಸಂಸ್ಕೃತಿ ಸಂಸ್ಕಾರದ ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯನ್ನು ಎಲ್ಲಾ ಹಬ್ಬ ಹರಿದಿನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಒಂದು ಇತಿಹಾಸ. ಕೀರ್ತಿಶೇಷರಾದ ಡಾ. ಆರ್.ಎನ್. ಶೆಣೈ, ಜಿ.ಪಿ.ಕಾಮತ್, ರಾಧಾಕೃಷ್ಣನ್ ನಾಯಕ್, ಎಂ.ಜಿ.ಗಿಣಿ ಮುಂತಾದವರ ನೇತೃತ್ವದಲ್ಲಿ ಪ್ರಾರಂಭದಲ್ಲಿ ಶ್ರೀ ಗಣೇಶೋತ್ಸವವನ್ನು ಕೆನರಾ ಬ್ಯಾಂಕ್, ಕಾಮತ್ ಹೋಟೆಲ್ ಸಭಾಂಗಣ, ಆರ್.ಹೆಚ್. ಚೌಟ್ರಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದು1976ರಲ್ಲಿ ಶ್ರೀ ಸಮಾಜ ನೊಂದಣಿ (ರಿಜಿಸ್ಟರ್) ಆಯಿತು ದಾವಣಗೆರೆಯ ಎಂಸಿಸಿ `ಎ’ ಬ್ಲಾಕ್‌ನ ವಿಶಾಲವಾದ 50 20 ಅಡಿ ನಿವೇಶನ ದಾವಣಗೆರೆಯ‌ ಕಾಮತ್ ಹೋಟೆಲ್ ಮಾಲೀಕರಾದ ದಿವಂಗತ ಗಣಪತಿ ಪಾಂಡುರಂಗ ಕಾಮತ್ ಸ್ವಇಚ್ಛೆಯಿಂದ ದಾನ ಕೊಟ್ಟಿದ್ದು 1980ರಲ್ಲಿ ಶ್ರೀ ಸುಕೃತಿಂದ್ರ ಕಲಾ ಮಂದಿರದ ಕಟ್ಟಡಕ್ಕೆ ನೆಲಗಟ್ಟು ಹಾಕಲಾಯಿತು. 1982 ರಲ್ಲಿ ಈ ಕಲಾಮಂದಿರವನ್ನು ಶ್ರೀ ಕಾಶಿ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. ಅಂದಿನಿಂದ
ಇಂದಿನವರೆಗೂ ಸಮಾಜದ ಮಹಿಳಾ ವಿಭಾಗವು ಸೇರಿದಂತೆ ಪ್ರತಿ ವರ್ಷ ನಿರಂತರವಾಗಿ ಶ್ರೀ ಗಣೇಶೋತ್ಸವ, ಚೂಡಿ ಪೂಜೆ, ಶ್ರೀ ದುರ್ಗಾ ನಮಸ್ಕಾರ, ದಸರಾ ದೀಪಾವಳಿ, ಏಕಾದಶಿಗಳಲ್ಲಿ ಸಾಮೂಹಿಕ ಭಜನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಕಾಳಜಿಯೊಂದಿಗೆ ವಿದ್ಯಾರ್ಥಿವೇತನ, ಹಾರ್ದಿಕ ಏಕಾದಶಿ, ಲಲಿತ ಸಹಸ್ರನಾಮ ಅವಕಾಶ ವಂಚಿತ ಪ್ರತಿಭಾವಂತ ಪುರುಷರಿಗೆ, ಮಹಿಳೆಯರಿಗೆ ಮಕ್ಕಳಿಗೆ
ಅವರುಗಳಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿ ಮುಕ್ತವಾದ ವೇದಿಕೆ ಕಲ್ಪಿಸುವ
ಸಾಂಸ್ಕೃತಿಕ ಚಟುವಟಿಕೆಗಳು ನಡೆಸುತ್ತಾ ಬಂದಿದ್ದು 1996ರಲ್ಲಿ ಗೋಕರ್ಣ ಮಠದ ಶ್ರೀ ವಿದ್ಯಾದಿರಾಜ ತೀರ್ಥ
ಸಭಾಂಗಣ ಕಲಾ ಮಂದಿರದಲ್ಲಿ ಮೇಲ್ಭಾಗದಲ್ಲಿ ವಿಷ್ಣು ಪೈ, ಎಂ.ಜಿ.ಕಿಣಿ ನೇತೃತ್ವದಲ್ಲಿ ಇನ್ನೊಂದು ಸಭಾಂಗಣ
ಕಟ್ಟಿಸಿದರು. ಇತ್ತೀಚಿಗೆ ಅಮಿತ ಡಾ|| ವೇಣುಗೋಪಾಲ್ ಪೈ ಅವರ ಅಧ್ಯಕ್ಷತೆಯಲ್ಲಿ ಸುಕೃತಿಂದ್ರ ಕಲಾಮಂದಿರದ ನವೀಕರಣ ಹೊಂದಿದ್ದು, ಯಾವುದೇ ಸಾರ್ವಜನಿಕ ದೇಣಿಗೆ ಪಡೆಯದೆ ನಮ್ಮ ಸಮಾಜ ಬಾಂಧವರ ತನು, ಮನ, ಧನ, ಸಹಕಾರ ಸಹಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ
ಸಭಾಂಗಣವಾಗಿದೆ. ನವಿಕರಿಸಲು ಶತಪ್ರಯತ್ನದಿಂದ ಈಗಿನ ಸಮಿತಿ ಪ್ರಯತ್ನಿಸುತ್ತಿದೆ. ಅರ್ಧ ಶತಮಾನದ ಈ ಸಮಾಜದ ಶ್ರೇಯೋಭಿವೃದ್ಧಿಗೆ ಈಗಿನ ನವ ಯುವ ಪೀಳಿಗೆಗಳು ಸಹಕಾರ, ಸಹಯೋಗ ನೀಡಿ ಐವತ್ತನೇ ವರ್ಷದ
ಸಂಭ್ರಮ ಆಚರಣೆ ಸುವರ್ಣೋತ್ಸವವಾಗಲಿ ಎಂಬ ಶುಭ ಹಾರೈಕೆ.

ಸಾಲಿಗ್ರಾಮ ಗಣೇಶ್ ಶೆಣೈ
ನಿಕಟಪೂರ್ವ ಅಧ್ಯಕ್ಷರು ಗೌಡ ಸಾರಸ್ವತ ಸಮಾಜ (ರಿ,)
ದಾವಣಗೆರೆ.

RELATED ARTICLES
- Advertisment -
Google search engine

Most Popular