ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ 18 ದಿನಗಳ ಭಗವದ್ಗೀತಾ ಪ್ರವಚನ ಸರಣಿ ನ . 25 ರಿಂದ ಪ್ರಾರಂಭ..ಗೊಂಡಿದೆ ಡಿ 11 ರವರೆಗೆ ನೆಡೆಯಲಿದೆ , ಪ್ರತಿ ದಿನ ಸಂಜೆ 6 ರಿಂದ 7 ವರೆಗೆ ಪ್ರವಚನವನ್ನು ಪ್ರಸಿದ್ಧ ವಿದ್ವಾನ್ ರಾದ ಶತಾವಧಾನಿ ಡಾ. ರಾಮನಾಥಾಚಾರ್ಯರ ಪ್ರವಚನ ನೀಡಲಿರುವರು.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ 48 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಅಂಗವಾಗಿ
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಿರಿಯ ಯತಿಗಳಾದ ಸುಶೀಯೆಂದ್ರ ತೀರ್ಥ ಶ್ರೀಪಾದರು, ಕಿದಿಯೂರು ಹೋಟೆಲ್ ಪ್ರೈ ಲಿ . ಪ್ರಾಯೋಜಕರಾದ ಶ್ರೀ ಭುವನೇಂದ್ರ ಕಿದಿಯೂರು , ಜಿತೇಶ್ ಕಿದಿಯೂರು, ಮದುಸೂಧನ್ ಪೂಜಾರಿ , ಶ್ರೀಮಠದ ದಿವಾನರಾದ ನಾಗರಾಜಾಚಾರ್ಯ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವಿಲಾಸ ಕುಮಾರ್, ಶ್ರೀ ಮಠದ ರಮೇಶ್ ಭಟ್, ನೂರಾರು ಭಕ್ತರೂ ಉಪಸ್ಥತರಿದ್ದರು.