Sunday, July 21, 2024
Homeಉಡುಪಿಶಂಕರಪುರ ದ್ವಾರಕಾಮಾಯಿ ಮಠದ ಪ್ರದಕ್ಷಿಣಾ ಮಹೋತ್ಸವ: ಧರ್ಮ, ರಾಷ್ಟ್ರ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ವಿಶೇಷ...

ಶಂಕರಪುರ ದ್ವಾರಕಾಮಾಯಿ ಮಠದ ಪ್ರದಕ್ಷಿಣಾ ಮಹೋತ್ಸವ: ಧರ್ಮ, ರಾಷ್ಟ್ರ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಎಂಟನೇ ದಿನದ ಪ್ರದಕ್ಷಿಣೆಗೆ ದಿನಾಂಕ: 21-06-2024 ಶುಕ್ರವಾರ ಅಂಬಲ್ಪಾಡಿ ಶ್ರೀ ಜನಾರ್ಧನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನದ ಧರ್ಮಾಧಿಕಾರಿ ಡಾ ನಿ.ಬೀ ವಿಜಯ ಬಲ್ಲಾಳ್ ಹಾಗೂ ಅರ್ಚಕರಾದ ರಮೇಶ್ ಸಮಾಗರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ, ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸುಧಾಕರ್ ಶೆಟ್ಟಿ, ಗೀತಾಂಜಲಿ. ಎಂ.ಸುವರ್ಣ, ವೀಣಾ .ಎಸ್. ಶೆಟ್ಟಿ, ಜಯರಾಮ್ ಶೆಟ್ಟಿಗಾರ್, ಉಮೇಶ್ ಸುಷ್ಮಾ ಪುತ್ರನ್ ದಪಂತಿಗಳು, ಮಾಲತಿ, ಪ್ರಶಾಂತ್ ಆಚಾರ್ಯ, ಗಣೇಶ್ ಗಂಗೊಳ್ಳಿ, ಸತೀಶ್ ದೇವಾಡಿಗ, ಶಶಾಂಕ್, ನಿಲೇಶ್ ಮತ್ತು ಅಭಿಮಾನಿ ಭಕ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular