Monday, July 15, 2024
HomeನಿಧನSSLC ಪರೀಕ್ಷೆ ಸಮಯದಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತ ; ಸ್ಥಳದಲ್ಲೇ ಸಾವು

SSLC ಪರೀಕ್ಷೆ ಸಮಯದಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತ ; ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ವೈಎಸ್‌ಆರ್‌ ಜಿಲ್ಲೆಯ ರಾಜುಪಾಲೆಂ ಮಂಡಲದಲ್ಲಿ ಕೊರ್ರಪಾಡುವಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಲಿಖಿತಾ (15) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವಿಗೀಡಾದ ಘಟನೆಯೊಂದು ನಡೆದಿದೆ.

ಮಾ.19 ರಂದು ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿದ್ದು, ಮಧ್ಯಾಹ್ನದ ಊಟದ ನಂತರ ತನ್ನ ಸಹ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಸಹಪಾಠಿಗಳು ಕೂಡಲೇ ಶಾಲಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ನಂತರ ಶಾಲಾ ಆಡಳಿತ ಮಂಡಳಿ ಲಿಖಿತಾಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪರೀಕ್ಷೆ ಮಾಡಿದ ವೈದ್ಯರು ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಆಕೆಯ ಪ್ರಾಣ ಹೋಗಿರುವುದಾಗಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular