Tuesday, April 22, 2025
Homeಮಣಿಪಾಲರೇಡಿಯೊ ಮಣಿಪಾಲದಲ್ಲಿ ಶ್ರಮಜೀವಿ ಸುಂದರ ಸಮಗಾರರೊಂದಿಗೆ ಮಾತುಕತೆ

ರೇಡಿಯೊ ಮಣಿಪಾಲದಲ್ಲಿ ಶ್ರಮಜೀವಿ ಸುಂದರ ಸಮಗಾರರೊಂದಿಗೆ ಮಾತುಕತೆ

ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಶ್ರಮಜೀವಿ ಸರಣಿ ಕಾರ್ಯಕ್ರಮದ ಮೊದಲ ಸಂಚಿಕೆ ಮೂಡಿಬರಲಿದೆ. ಈ ಕಾರ್ಯಕ್ರಮದಲ್ಲಿ ಪಾದರಕ್ಷೆ ತಯಾರಿ ಮತ್ತು ರಿಪೇರಿ ಕಾಯಕದಲ್ಲಿ ತೊಡಗಿರುವ ಕಾರ್ಕಳ ಮಾರಿಗುಡಿ ಎದುರುಗಡೆಯಿರುವ ಚರ್ಮಕುಟೀರದ ಸುಂದರ ಸಮಗಾರ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜುಲೈ ತಿಂಗಳ 3ರಂದು ಬುಧವಾರ ಸಂಜೆ 5.25ಕ್ಕೆ ಪ್ರಸಾರವಾಗಲಿದೆ ಮತ್ತು ಜುಲೈ 4ರಂದು ಗುರುವಾರ ಮಧ್ಯಾಹ್ನ 1.25ಕ್ಕೆ ಇದರ ಮರು ಪ್ರಸಾರವಿರುತ್ತದೆ.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular