ಉಡುಪಿ: ಜಿಲ್ಲಾ ನ್ಯಾಾಯಾಲಯದ ಆವರಣದಲ್ಲಿ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮಕ್ಕೆೆ ಆಗಮಿಸಿದ ನ್ಯಾಯಾಧೀಶರು ಶ್ರೀಕೃಷ್ಣ ಮಠಕ್ಕೆೆ ರವಿವಾರ ಭೇಟಿ ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಾಯಮೂರ್ತಿ ಅರವಿಂದ್ ಕುಮಾರ್ , ಹೈಕೋರ್ಟ್ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ , ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ.ಉಮಾ , ರಾಮಚಂದ್ರ ಡಿ.ಹುದ್ದಾಾರ್ , ಟಿ.ವೆಂಕಟೇಶ್ ನಾಯಕ್ , ಹೈಕೋರ್ಟ್ ರಿಜಿಸ್ಟ್ರಾಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ,
ಅಡ್ವಕೇಟ್ ಜನರಲ್ ಶಶಿಕಿರಣ್ ಎಸ್.ಶೆಟ್ಟಿ, ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ್ ಭೇಟಿ ನೀಡಿ ಪರ್ಯಾಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರಿಂದ ಅನುಗ್ರಹ ಮಂತ್ರಾಾಕ್ಷತೆ ಪಡೆದುಕೊಂಡು ಕೋಟಿಗೀತಾಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.