Tuesday, May 13, 2025
Homeಅಪರಾಧಅಶ್ಲೀಲ ವಿಡಿಯೊ ಮಾದರಿಯಲ್ಲಿ ಸೆಕ್ಸ್ ನಡೆಸುವಂತೆ ಒತ್ತಾಯಿಸಿದ ಮಹಿಳೆಯನ್ನು ಕೊಲೆಗೈದ ಟೆಕ್ಕಿ

ಅಶ್ಲೀಲ ವಿಡಿಯೊ ಮಾದರಿಯಲ್ಲಿ ಸೆಕ್ಸ್ ನಡೆಸುವಂತೆ ಒತ್ತಾಯಿಸಿದ ಮಹಿಳೆಯನ್ನು ಕೊಲೆಗೈದ ಟೆಕ್ಕಿ

ಬೆಂಗಳೂರು: ತನ್ನೊಂದಿಗೆ ಅಶ್ಲೀಲ ವಿಡಿಯೊ ಮಾದರಿಯಲ್ಲಿ ಸೆಕ್ಸ್ ನಡೆಸುವಂತೆ ಪೀಡಿಸಿದ ಮಹಿಳೆಯನ್ನು ಹತ್ಯೆಗೈದಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಈ ಕುರಿತ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಹೇರೋಹಳ್ಳಿ ನಿವಾಸಿ 28ರ ಹರೆಯದ ನವೀನ್ ಎಂಬಾತ 48ರ ಹರೆಯದ ಶೋಭಾ ಎಂಬಾಕೆಯನ್ನು ಏ 19ರಂದು ಕೊಲೆಗೈದಿದ್ದಾನೆ. ಕೊಲೆಗೈದ ಬಳಿಕ ಆಕೆಯ ಕಾರು ಸಮೇತ ಪರಾರಿಯಾಗಿದ್ದು, ಆಕೆಯ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ದಾನೆ. ಶೋಭಾ ಪತಿ ಚಿಕ್ಕಪೇಟೆಯಲ್ಲಿದ್ದು, ಈಕೆ ಕೊಡಿಗೆಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ತಮ್ಮ 2ನೇ ಪುತ್ರಿ ಜೊತೆಗೆ ಆಕೆ ವಾಸವಿದ್ದರು. ಮೊದಲನೇ ಪುತ್ರಿಗೆ ಮೊದಲೇ ಮದುವೆಯಾಗಿ ಪತಿಯೊಂದಿಗಿದ್ದಾಳೆ. ಎರಡನೇ ಪುತ್ರಿಯ ವಿವಾಹ ಏ 4ರಂದು ನಡೆದಿತ್ತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮೈಸೂರು ಮೂಲದ ಟೆಕ್ಕಿ ನವೀನ್ ಎಂಬಾತನನ್ನು ಮನೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಏ 18ರಂದು ರಾತ್ರಿ 10 ಗಂಟೆ ವೇಳೆಗೆ ಹೆಬ್ಬಾಳಕ್ಕೆ ಬಂದಿದ್ದ ನವೀನ್ ನನ್ನು ಈಕೆಯೇ ತನ್ನ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮನೆಯಲ್ಲಿ ನವೀನ್ ಗೆ ಅಶ್ಲೀಲ ವಿಡಿಯೊ ತೋರಿಸಿ ಅದರಂತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ವಿಚಾರಕ್ಕೆ ಗಲಾಟೆಯಾಗಿದ್ದು, ಆರೋಪಿಯು ಶೋಭಾರ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಮನೆಯಿಂದ ಆಕೆಯ ಕಾರು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಮರುದಿನ 2ನೇ ಪುತ್ರಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಇದ್ದುದರಿಂದ ಮನೆಗೆ ಬಂದು ಪರಿಶೀಲಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಸಾಕ್ಷ್ಯ ನಾಶದ ಉದ್ದೇಶದಿಂದ ನವೀನ್, ಶೋಭಾಳ ಕಾರು, ಮೊಬೈಲ್, ಎಟಿಎಂ ಹಿಡಿದುಕೊಂಡು ಪರಾರಿಯಾಗಿದ್ದ. ಮೊಬೈಲ್ ಹಿಂಭಾಗದಲ್ಲಿದ್ದ ಎಟಿಎಂನಿಂದ 2 ಎಟಿಎಂ ಕೇಂದ್ರಗಳಿಂದ 1.80 ಲಕ್ಷ ರೂ ಡ್ರಾ ಮಾಡಿದ್ದಾನೆ. ಕಾರು ಒಂದು ಕಡೆ ನಿಲ್ಲಿಸಿ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular