ದಾವಣಗೆರೆ : ಚಿತ್ರದುರ್ಗದ ಸುದ್ದಿ ಗಿಡುಗ ದಿನಪತ್ರಿಕೆ ಸಂಪಾದಕರಾದ ಮಂಜುನಾಥ್ ರವರು ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರಿಗೆ ಅವರ ನಾಲ್ಕು
ದಶಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಸ್ಮರಿಸಿ ಇತ್ತೀಚಿಗೆ ದಾವಣಗೆರೆಯ ಕಲಾಕುಂಚ ಸಭಾಂಗಣದಲ್ಲಿ
ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕವಿಗೋಷ್ಠಿಯ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಯಾವುದೇ ಸಂಘಟನೆಗಳು ಮಾಡದಂತಹ ನಿರಂತರ, ಕಠಿಣ ಪರಿಶ್ರಮದಿಂದ ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಸಾಂಸ್ಕೃತಿಕ ಸಾಹಿತ್ಯ ಕಲೆ ಆಧ್ಯಾತ್ಮ ಸಾಮಾಜಿಕ ಕಾಳಜಿಯ ಈ ಅಭೂತ ಪೂರ್ಣ
ಶೆಣೈಯವರ ಕಾಯಕ ಎಂದು ಪತ್ರಿಕೆಯ ಸಂಪಾದಕ ಮಂಜುನಾಥ್ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಯುವ ಪತ್ರಕರ್ತ ಎಸ್.ಎಂ.ಲಿಖಿತ್, ಎ.ಸಿ. ಶಶಿಕಲಾ ಶಂಕರಮೂರ್ತಿ ಕಲಾಕುಂಚದ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತ ಕಲ್ಲೇಶ್, ಹಾವೇರಿ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಪರಮೇಶ್ವರಯ್ಯ ವೀರಭದ್ರಯ್ಯ ಮಠದ ಕಲಾಕುಂಚ ಕಚೇರಿ ಕಾರ್ಯದರ್ಶಿ ಎಂ.ಎಸ್.ಪ್ರಸಾದ್, ಸಹ ಕಾರ್ಯದರ್ಶಿ ಕೆ.ಸಿ. ಉಮೇಶ್ ಸಮಿತಿ ಸದಸ್ಯರಾದ ಶೈಲಾ ವಿನೋದ್ ದೇವರಾಜ್, ಪುಷ್ಪ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.