Tuesday, January 14, 2025
Homeಹಾಸನಪ್ರೇಯಸಿಯಿಂದ ಪ್ರಿಯಕರನಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ನಮ್ಮಿಬ್ಬರಿಗೂ ಮದುವೆಯಾಗಿದೆ; ಯುವತಿಯಿಂದ ಪೊಲೀಸರಿಗೆ ಮೆಸೇಜ್‌

ಪ್ರೇಯಸಿಯಿಂದ ಪ್ರಿಯಕರನಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ನಮ್ಮಿಬ್ಬರಿಗೂ ಮದುವೆಯಾಗಿದೆ; ಯುವತಿಯಿಂದ ಪೊಲೀಸರಿಗೆ ಮೆಸೇಜ್‌

ಹಾಸನ: ಪ್ರಿಯಕರನಿಗೆ ಪ್ರೇಯಸಿ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಯುವತಿ ಪೊಲೀಸರಿಗೆ ಮೆಸೇಜ್ ಮಾಡಿರುವ ಸ್ಕ್ರೀನ್‌ಶಾಟ್‌ ವೈರಲ್ ಆಗಿದೆ.

ಚಾಕು ಇರಿತಕ್ಕೆ ಒಳಗಾದ ಯುವಕ ಮನುಕುಮಾರ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಯುವತಿಗೆ ಹದಿನಾಲ್ಕು ದಿನಗಳ ನ್ಯಾಯಂಗ ಬಂಧನ ವಿಧಿಸಲಾಗಿದೆ.
ಮನುಕುಮಾರ್‌ಗೂ ನನಗೂ ಮದುವೆ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ನೋಂದಣಿ ಮಾಡಿಸಿಕೊಂಡಿದ್ದೇವೆ ಎಂದು ಮದುವೆ ಸರ್ಟಿಫಿಕೇಟ್ ಬಹಿರಂಗಗೊಳಿಸಿದ್ದಾಳೆ ಯುವತಿ. 2023 ನ. 10ರಂದು ಮದುವೆ ಆಗಿದೆ. 2024ರ ಅ. 25ರಂದು ನೋಂದಣಿ ಮಾಡಿಸಿರುವ ದಿನಾಂಕ ಸರ್ಟಿಫಿಕೇಟ್‌ನಲ್ಲಿ ನಮೂದಾಗಿದೆ. ಆತ ನನ್ನೊಂದಿಗೆ ಮದುವೆ ಆಗಿ ತುಂಬಾ ಜನರ ಜೊತೆ ಅಫೇರ್ ಇಟ್ಟುಕೊಂಡಿದ್ದ. ಹೊಸ ವರ್ಷದ ಪಾರ್ಟಿಗೂ ಹುಡುಗಿ ಕರೆದುಕೊಂಡು ಹೋಗಿದ್ದ. ಅದು ಗೊತ್ತಾಗಿಯೇ ನಾನು ಅಲ್ಲಿದೆ ಹೋಗಿ ಜಗಳ ಮಾಡಿದ್ದು. ಈ ವಿಚಾರದಲ್ಲಿ ಅವರ ಮನೆಯ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಯುವತಿ ಮೆಸೇಜ್ ಮೂಲಕ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾಳೆ.

ಘಟನೆ ಸಂಬಂಧ ಆರೋಪಿ ಯುವತಿಯನ್ನು ಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿ ನಿನ್ನೆ ರಾತ್ರಿ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಆರೋಪಿಯನ್ನು ಹಾಸನ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

RELATED ARTICLES
- Advertisment -
Google search engine

Most Popular