ಕಾರ್ಕಳ ಟೈಗರ್ಸ್ ಸಂಸ್ಥೆಯ ಪ್ರಮುಖಪ್ರಶಾಂತ್ ಕಾಮತ್‌ರವರ ನಿವಾಸಕ್ಕೆ ತುಳುಪರ ಸಂಘಟಕರ ಭೇಟಿ

0
345

ತುಳುಪರ ಸಂಘಟಕರು ಇಂದು ಕಾರ್ಕಳ ಟೈಗರ್ಸ್ ಸಂಸ್ಥೆಯ ಪ್ರಮುಖರಾದ ಪ್ರಶಾಂತ್ ಕಾಮತ್‌ರವರ ನಿವಾಸಕ್ಕೆ ಭೇಟಿ ನೀಡಿದರು.

ತುಳುನಾಡಿನ ಹೆಮ್ಮೆಯ ಜಾನಪದ ಕಲೆಯಲ್ಲಿ ಒಂದಾದ ಹುಲಿಕುಣಿತದ ತರಬೇತಿಯನ್ನು ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಕಾರ್ಕಳ ತಾಲೂಕಿಗೆ ಪರಿಚಯಿಸಿದ್ದು ಕಾರ್ಕಳದ ತುಳುವರಿಗೆ ಹೆಮ್ಮೆಯ ವಿಷಯವಾಗಿದೆ.

ತುಳುನಾಡಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಕಾರ್ಕಳ ಟೈಗರ್ಸ್ ಈಗಾಗಲೇ ಕಾರ್ಯ ಪ್ರಾರಂಭ ಮಾಡಿದ್ದು ಈ ನಿಟ್ಟಿನಲ್ಲಿ ತುಳುಪರ ಸಂಘಟಕರ ತಂಡವು ಬೋಳ ಪ್ರಶಾಂತ್ ಕಾಮತ್ ರನ್ನು ಭೇಟಿ ಮಾಡಿ ತುಳು ವಿಚಾರಗಳ ಬಗ್ಗೆ ಚರ್ಚೆ ಮಾಡಿತು.

ಈ ತುಳು ತಂಡದಲ್ಲಿ ವಿಶು.ಶ್ರೀಕೇರ, ಶೇಖರ್ ಶ್ರೀಗಂಗೆ, ಪ್ರಶಾಂತ್ ನಂದಳಿಕೆ, ಸುನಿಲ್ ಹಿರ್ಗಾನ, ಪ್ರದೀಪ್ ಬಂಗ್ಲೆಗುಡ್ಡೆ, ಸುರೇಶ್ ಶ್ರೀದುರ್ಗಾ, ಶಶಿ ದಿವಾಕರ್, ವಿಜೇತಾ ಬೈಲೂರು, ಅಶ್ವಿನಿ ತೆಳ್ಳಾರು, ದಿಶಾ ಕೌಡೂರು ಇವರು ಪ್ರಶಾಂತ್ ಕಾಮತ್‌ರವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ತುಳುವನ್ನು ಬೆಳೆಸಿ ಉಳಿಸುವ ಬಗ್ಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಬಿಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್‌, ಉದ್ಯಮಿ ಪ್ರದೀಪ್ ರವರು ಜೊತೆಗಿದ್ದರು.

LEAVE A REPLY

Please enter your comment!
Please enter your name here