ಹಾಸನದ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಹೃಷಿಕೇಶದ ಕೈಲಾಸಾಶ್ರಮದಲ್ಲಿ ವೇದಾಂತ ಅಧ್ಯಯನ ಮಾಡುತ್ತಿರುವ ನೈಷ್ಠಿಕ ಬ್ರಹ್ಮಚಾರಿ ಸ್ವಾಮಿ ಸರ್ವಾತ್ಮಚೈತನ್ಯ ಅವರು ಇಂದು (ಮಾ.16) ಬೆಳಿಗ್ಗೆ ಭೇಟಿ ಕೊಟ್ಟರು. ದೇವಾಲಯದ ಕೆಲಸಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ಬ್ಯಾಟರಂಗಾಚಾರ್, ಖಜಾಂಜಿಗಳಾದ ಲೋಕೇಶ್ ಬಿ ,ಶ್ರೀ ಕಾಳಿಕಾಂಬಾ ದೇವಾಲಯದ ನವೀಕರಣ ಸಮಿತಿಯ ಅಧ್ಯಕ್ಷರಾದ ಹೆಚ್.ಕೆ ಆನಂದ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ವಿ. ಹರೀಶ್, ತಾಲ್ಲೂಕು ವಿಶ್ವಕರ್ಮ ಸಮಾಜದ ನಿರ್ದೇಶಕರಾದ ಶ್ರೀಯುತ ಹೆಚ್. ಎಸ್ ಆನಂದ್, ಶ್ರೀಯುತ ಎಮ್.ಟಿ. ಸುರೇಶ್ ಉಪಸ್ಥಿತರಿದ್ದರು.