Sunday, March 23, 2025
Homeಬೆಂಗಳೂರುಬೆಂಗಳೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ : ಚಿರತೆ ಬಾಯಿಯಿಂದ ರುಂಡವಿಲ್ಲದ ಮೃತದೇಹ ಬಿಡಿಸಿಕೊಂಡ ಜನರು..!

ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ : ಚಿರತೆ ಬಾಯಿಯಿಂದ ರುಂಡವಿಲ್ಲದ ಮೃತದೇಹ ಬಿಡಿಸಿಕೊಂಡ ಜನರು..!


ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಂಬಾಲು ಗೊಲ್ಲರಹಟ್ಟಿ ಬಳಿ ಚಿರತೆ ದಾಳಿಗೆ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ಸಂಜೆ ಜಮೀನಿಗೆ ಹುಲ್ಲು ತರಲು ಹೋಗಿದ್ದ ಮಹಿಳೆ ಕರಿಯಮ್ಮ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಬಳಿಕ ಮಹಿಳೆಯ ರುಂಡ ತಿಂದಿದೆ. ಸಂಜೆ ಹೋಗಿದ್ದ ಮಹಿಳೆ ಮನೆಗೆ ಬರದೆ ಇದ್ದಾಗ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಕಾಯುತ್ತಿದ್ದ ವೇಳೆ ಚಿರತೆ ಮತ್ತೆ ಮೃತದೇಹವನ್ನು ಹೊತ್ತಯಲು ಬಂದಾಗ ಗ್ರಾಮಸ್ಥರು ಕಲ್ಲು,ದೊಣ್ಣೆ, ಮಚ್ಚಿನಿಂದ ಚಿರತೆ ಮೇಲೆ ದಾಳಿ ಮಾಡಿದ್ದು, ಚಿರತೆ ಓಡಿಹೋಗಿದೆ.

RELATED ARTICLES
- Advertisment -
Google search engine

Most Popular