ಉತ್ತರಪ್ರದೇಶ: ಮಹಿಳೆಯೊಬ್ಬಳು ತನ್ನ ಗಂಡನ ಜತೆ ಭಾರೀ ವಾಗ್ವಾದಕ್ಕಿಳಿದಿದ್ದು, ವಿವಾಹವಾಗಿದ್ದರೂ ಸಹ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸಿದಲ್ಲದೇ, ಆತನನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು ಎಂಬ ವಿಷಯಕ್ಕೆ ತೀವ್ರ ಜಟಾಪಟಿ ನಡೆಸಿದ್ದಾಳೆ. ತಾನು ಬಯಿಸಿದ್ದು ಸಿಗುತ್ತಿಲ್ಲ ಎಂದು ಕುಪಿತಗೊಂಡ ಮಹಿಳೆ ವಿದ್ಯುತ್ ಕಂಬ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಘಟನೆ ಉತ್ತರಪ್ರದೇಶದ ಗೋರಖ್ಪುರದಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆ ವಿದ್ಯುತ್ ಜೀವ ಉಳಿಸುವ ಸಲುವಾಗಿ ಕೆಳಗಿಳಿಯುವಂತೆ ಮನವಿ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಸ್ಪಂದಿಸದ ಮಹಿಳೆ ಇಳಿಯುವುದಿಲ್ಲ, ನಾನು ಸಾಯುವುದೇ ಲೇಸು ಎಂದಿದ್ದಾಳೆ. ಇದರಿಂದ ಬೇಸತ್ತ ಪೊಲೀಸರು ಮುನ್ನಚ್ಚೇರಿಕೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸ್ಥಳೀಯ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ, ಪವರ್ ಆಫ್ ಮಾಡಿದ್ದಾರೆ.
ಘಟನೆಯ ವಿವರ: ಗೋರಖ್‌ಪುರದ ಪಿಪ್ರೈಚ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ವಿದ್ಯುತ್ ಕಂಬದ ಮೇಲಿದ್ದ ಮಹಿಳೆ ಮತ್ತು ಸ್ಥಳೀಯರು ಆಕೆಯನ್ನು ಕೆಳಗಿಳಿಯುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಮೂರು ಮಕ್ಕಳ ತಾಯಿ ಸುಮನ್ ದೇವಿ (34) ಎಂದು ಗುರುತಿಸಲಾದ ಮಹಿಳೆಯು ಪುರುಷನೊಂದಿಗೆ ಆಪಾದಿತ ಸಂಬಂಧವನ್ನು ಹೊಂದಿದ್ದಳು. ಹೆಂಡತಿಯ ವಿವಾಹೇತರ ಸಂಬಂಧ ತಿಳಿದ ಆಕೆಯ ಪತಿ ರಾಮ್ ಗೋವಿಂದ್ (35) ಈ ಬಗ್ಗೆ ಪ್ರಶ್ನಿಸಿದ್ದಾರೆ.ಇದಕ್ಕೆ ತಿರುಗೇಟು ಕೊಟ್ಟ ಪತ್ನಿ, ತನ್ನ ಪ್ರೇಮಿಯೂ ಸಹ ನಿನ್ನಂತೆಯೇ ನಮ್ಮ ಮನೆಯಲ್ಲಿ ಇರಬೇಕು ಎಂದು ಭಂಡತನ ಪ್ರದರ್ಶಿಸಿದ್ದಾಳೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತೀವ್ರ ಜಟಾಪಟಿ ನಡೆದಿದೆ. ಇದರಿಂದ ಮನನೊಂದ ಮಹಿಳೆ ಪತಿ ಗೋವಿಂದ್ ತನ್ನ ಪ್ರಸ್ತಾಪವನ್ನು ನಿರಾಕರಿಸಿದರು ಎಂದು ವಿದ್ಯುತ್ ಕಂಬದ ಮೇಲೆ ಹತ್ತಿ ಹೈಟೆನ್ಷನ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.