Tuesday, April 22, 2025
Homeರಾಷ್ಟ್ರೀಯಮಕ್ಕಳು ಆಟವಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಸೂಟ್​ಕೇಸ್​ನಲ್ಲಿತ್ತು ಮಹಿಳೆಯ ರುಂಡ

ಮಕ್ಕಳು ಆಟವಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಸೂಟ್​ಕೇಸ್​ನಲ್ಲಿತ್ತು ಮಹಿಳೆಯ ರುಂಡ

ಮಹಾರಾಷ್ಟ್ರ : ಮಕ್ಕಳು ಆಟವಾಡುತ್ತಿರುವಾಗ ಸೂಟ್​ಕೇಸ್​ ಒಂದು ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ಕತ್ತರಿಸಿದ ರುಂಡವಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಸೂಟ್‌ಕೇಸ್‌ನಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾದ ನಂತರ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಸಂಜೆ ವಿರಾರ್ ಪ್ರದೇಶದ ಪಿರ್ಕುಂದ ದರ್ಗಾ ಬಳಿ ಈ ಪತ್ತೆಯಾಗಿದೆ. ಕೆಲವು ಮಕ್ಕಳು ರಸ್ತೆ ಬದಿ ಎಸೆಯಲಾಗಿದ್ದ ಸೂಟ್‌ಕೇಸ್ ಅನ್ನು ಕಂಡುಕೊಂಡು ಕುತೂಹಲದಿಂದ ಅದನ್ನು ತೆರೆದರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಂಡ್ವಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ, ಕೊಲೆಯನ್ನು ಬಯಲು ಮಾಡಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಮಹಿಳೆ ಯಾರು ಎಂಬುದರ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆಕೆಯ ದೇಹದ ಹುಡುಕಾಟವೂ ಮುಂದುವರೆದಿದೆ.

ಮಹಿಳೆಯರ ವಯಸ್ಸು 25 ರಿಂದ 35 ವರ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಶವ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆದರೆ ಮಹಿಳೆಯನ್ನು ಕೊಲೆ ಮಾಡಿದ ನಂತರವೇ ಶವವನ್ನು ಎಸೆಯಲಾಗಿತ್ತು.

ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಕೊಳೆತ ಶವವನ್ನು ವಶಪಡಿಸಿಕೊಂಡಿದೆ. ಪ್ರಸ್ತುತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಗಡದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರ ನಡೆಸುವ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಸ್ತುತ, ಶವವನ್ನು ಗುರುತಿಸಲು ಹತ್ತಿರದ ಜನರ ಸಹಾಯ ಪಡೆಯಲಾಗುತ್ತಿದೆ. ಇದಲ್ಲದೆ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಹಿಳೆಯರ ನಾಪತ್ತೆ ವರದಿಗಳ ಪರಿಶೀಲನೆಯನ್ನು ಸಹ ಮಾಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular