Sunday, January 19, 2025
HomeUncategorizedತುಂಬೆ ನೂತನ ಡ್ಯಾಮ್ ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವಂತೆ ಶಾಸಕರಿಗೆ ಹಾಗೂ ತಹಸೀಲ್ದಾರರಿಗೆ ಲಿಖಿತ ಮನವಿ

ತುಂಬೆ ನೂತನ ಡ್ಯಾಮ್ ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವಂತೆ ಶಾಸಕರಿಗೆ ಹಾಗೂ ತಹಸೀಲ್ದಾರರಿಗೆ ಲಿಖಿತ ಮನವಿ


ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಗಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾದ ನೂತನ ಡ್ಯಾಮ್ ನಲ್ಲಿ ಆರು ಮೀಟರ್ ನೀರು ಸಂಗ್ರಹಿಸುವುದಾಗಿ ಮುಳುಗಡೆ ಪ್ರದೇಶಕ್ಕೆ ಪರಿಹಾರ ನೀಡಿ ಇದೀಗ ಯಾವುದೇ ಪೂರ್ವ ಸೂಚನೆ ನೀಡದೆ 6:30 ಮೀಟರ್ರಿಗೂ ಅಧಿಕ ನೀರು ಸಂಗ್ರಹಿಸಿದ್ದು ರೈತರು ಆತಂಕ ಗೋಳಾ ಗಾಗಿದ್ದಾರೆ ತುಂಬೆ ಡ್ಯಾಮಿನಲ್ಲಿ ಜಲಮಟ್ಟ ಕಾಯ್ದ ಕೊಳ್ಳದೆ ಇರುವುದರಿಂದ ದಾರಿಹೋಕರು ಜಾನುವಾರು ಸಹಿತ ರೈತರು ಸಂಕಷ್ಟಕ್ಕೀಡ್ ಆಗಿದ್ದಾರೆ ರೈತರು ಬೆಳೆಸಿದ ಬೆಳೆ ನಿರುಪಾಲಾಗುತ್ತಿದೆ ಆದುದರಿಂದ ಆರು ಮೀಟರ್ ಗಿಂತ ಹೆಚ್ಚು ನೀರು ನಿಲ್ಲಿಸುವ ಇರಾದೆ ಜಿಲ್ಲಾ ಆಡಳಿತಕ್ಕೆ ಇದ್ದರೆ ಮುಂಚಿತವಾಗಿ ತಿಳಿಸಿ ಸಂತ್ರಸ್ತ ರೈತರಿಗೆ ಕೇಂದ್ರ ಜಲ ಆಯೋಗ ತಿಳಿಸಿದಂತೆ ವರತೆ ಪ್ರದೇಶಕ್ಕೆ ಸೇರಿಸಿ ಮುಳುಗಡೆ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ ನೀಡಿ ನೀರು ಸಂಗ್ರಹಿಸುವಂತೆ ರೈತರ ಹಿತಾಸಕ್ತಿ ಕಾಪಾಡಿ ಅನ್ನದಾತನ ಸಂಕಷ್ಟವನ್ನು ಪರಿಹರಿಸುವಂತೆ ಬಂಟ್ವಾಳ ಶಾಸಕರಿಗೆ ಹಾಗೂ ಬಂಟ್ವಾಳ ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ತುಂಬೆ ಜಯಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಬಟ್ ನೀಡಿ ರೈತರಿಗೆ ನ್ಯಾಯಾ ಒದಗಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular