ತುಮಕೂರು : ಇತ್ತೀಚೆಗೆ ಆನ್ಲೈನ್ ಗೇಮಿಂಗ್ಗೆ ಅನೇಕ ಯುವಕರು ಬಲಿಯಾಗುತ್ತಿದ್ದು, ಇದೀಗ ಓರ್ವ ಯುವಕ ಆನ್ಲೈನ್ಗೇಮಿಂಗ್ನಲ್ಲಿ ರೂ.20 ಸಾವಿರ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.
ಆನ್ಲೈನ್ ಗೇಮ್ ಆಡಬೇಡ ಎಂದು ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದು ಟಿ.ಎಸ್.ಭರತ್ (24) ಎಂಬುವವನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆನ್ಲೈನ್ ಗೇಮಿಂಗ್ನಲ್ಲಿ ರೂ.20 ಸಾವಿರ ಕಳೆದುಕೊಂಡಿದ್ದ ಭರತ್ ವಿಚಾರ ತಿಳಿದ ತಾಯಿಯು, ಇನ್ಮುಂದೆಯಾದರೂ ಆಡಬೇಡಪ್ಪ ಅಂತಾ ಬುದ್ದಿಮಾತು ಹೇಳಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.