Monday, July 15, 2024
Homeಅಪಘಾತಮದುಮಗಳಂತೆ ಸಿಂಗಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ಮದುಮಗಳಂತೆ ಸಿಂಗಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ರಂಜಿತ್ ಸಿಂಗ್ ಕಾಲೇಜಿನಲ್ಲಿ B.Sc. 2ನೇ ವರ್ಷ ಓದುತ್ತಿದ್ದ 21 ವರ್ಷದ ಪುನೀತ್ ದುಬೆ ಶವವಾಗಿ ಪತ್ತೆಯಾಗಿದ್ದಾನೆ.ವಿಚಿತ್ರ ಅಂದ್ರೆ ಆತ ವಧುವಿನಂತೆ ಸಿಂಗರಿಸಿಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ. ಮದುಮಗಳಂತೆ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಂಡು ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಅಷ್ಟೇ ಅಲ್ಲ ಆತನ ಕಣ್ಣಿಗೆ ಬಟ್ಟೆಯಿಂದ ಕಟ್ಟಲಾದ ಸ್ಥಿತಿಯಲ್ಲಿ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಯುವಕ ಹಾಸ್ಟೆಲ್ ರೂಂನಲ್ಲಿ ನಿಗೂಢ ರೀತಿ ಶವವಾಗಿ ಪತ್ತೆಯಾಗಿದ್ದಾನೆ.

ರೂಂನಲ್ಲಿ ನೆಲದ ಮೇಲೆ ರಕ್ತ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪುನೀತ್ ಸಾವು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಶಂಕೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.

ಮೃತ ಪುನೀತ್ ತಂದೆಯಾದ ತ್ರಿಭುವನ್ ದುಬೆ ಅವರು ರೈತ ನಾಯಕರಾಗಿದ್ದು, ಉದಯ್ ಪುರದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮಗ ವಿದ್ಯಾಭ್ಯಾಸಕ್ಕಾಗಿ 2 ವರ್ಷಗಳ ಹಿಂದೆ ಇಂದೋರ್ ಗೆ ಬಂದಿದ್ದನು. ಈಗ B.Sc. ಕಂಪ್ಯೂಟರ್ ಸೈನ್ಸ್ ನಲ್ಲಿ 2ನೇ ವರ್ಷ ವ್ಯಾಸಂಗ ಮಾಡುತ್ತಿದ್ದನು. ಪ್ರತಿ ದಿನ ರಾತ್ರಿ ಮನೆಗೆ ಕರೆ ಮಾಡಿ ಮಾತಾಡುತ್ತಿದ್ದನು ಎಂದು ಪುನೀತ್ ತಂದೆ ಹೇಳಿದ್ದಾರೆ.

ಪುನೀತ್ ಕೊನೆಯದಾಗಿ ಗುರುವಾರ ತನ್ನ ತಾಯಿ ವಿಭುಟಿ ದುಬೈ ಅವರ ಜೊತೆ ರಾತ್ರಿ 10 ಗಂಟೆ ಸಮಯದಲ್ಲಿ ಮಾತನಾಡಿರುವುದು ತಿಳಿದು ಬಂದಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಪುನೀತ್ ಕೋಚಿಂಗ್ ಸೆಂಟರ್ ನಲ್ಲಿ ಇರುತ್ತಿದ್ದನೆಂದು ಅವರ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಶುಕ್ರವಾರ ಪುನೀತ್ ಜೊತೆ ಮಾತಾಡಲು ಪೋಷಕರು ದಿನವೆಲ್ಲಾ ಪ್ರಯತ್ನಿಸಿದ್ದಾರೆ. ಆತ ಫೋನ್ ತೆಗೆಯದ ಕಾರಣ ಆತನ ಸ್ನೇಹಿತರಿಗೆ, ಇಂದೋರ್ ನಲ್ಲಿರುವ ಸಂಬಂಧಿಕರಿಗೆಲ್ಲಾ ಕರೆ ಮಾಡಿ ವಿಚಾರಿಸಿದ್ದೆವು. ಕೆಲವರು ರೂಂ ಬಳಿ ಹೋಗಿ ನೋಡಿದ್ದಾರೆ. ಆದರೆ ರೂಂ ಬಾಗಿಲು ಹಾಕಿದೆ ಎಂದು ವಾಪಸ್ಸು ಬಂದಿದ್ದರೆಂದು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಪುನೀತ್ ಬಳಸುತ್ತಿದ್ದ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಕೆಲ ವಸ್ತುಗಳನ್ನು ಸೀಜ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಹಾಗೇ ಹಾಸ್ಟೆಲ್ ರೂಂಮೇಟ್ಸ್ ಅನ್ನು ಸಹ ವಿಚಾರಣೆ ಒಳಪಡಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಂತರ ಪುನೀತ್ ಮೃತದೇಹವನ್ನು ಹುಟ್ಟೂರಾದ ಉದಯ್ ಪುರಕ್ಕೆ ತೆಗೆದುಕೊಂಡು ಹೋಗಿದ್ದು ಅಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪುನೀತ್ ತಂದೆ ತ್ರಿಭುವನ್ ದುಬೆ, ತೀವ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular