ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಬಕ- ಪುತ್ತೂರು ರೈಲ್ವೇ ನಿಲ್ದಾಣದ ಮುರ ಎಂಬಲ್ಲಿ ಜೂ. 1 ರಂದು ಛತ್ತೀಸ್‌ಗಢದ ಮನಮೋಹನದಾಸ್ (24) ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಮನಮೋಹನದಾಸ್ ಎಂಬಾತ ಪ್ರೇಮ ವೈಫಲ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈತ ಛತ್ತೀಸ್‌ಗಢದ ಯುವತಿಯನ್ನು ಪ್ರೀತಿಸುತ್ತಿದ್ದು, ಅವರಿಬ್ಬರ ಮಧ್ಯೆ ವಿರಸ ಉಂಟಾಗಿದ್ದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪ್ರೇಯಸಿಯ ದೂರವಾಣಿಗೆ ಸಂದೇಶ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದ ಈತ ಒಂದು ತಿಂಗಳ ಹಿಂದೆಯಷ್ಟೇ ಪುತ್ತೂರಿಗೆ ಬಂದು, ಕಳೆದ ಒಂದು ತಿಂಗಳಿನಿಂದ ಪುತ್ತೂರಿನಲ್ಲಿ ಎಳನೀರು ಕೀಳುವ ಕೆಲಸ ಮಾಡಿಕೊಂಡಿದ್ದು, ಮೇ 30ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.