ಬೆಂಗಳೂರು: ವಧು-ವರರನ್ನು ಸ್ವಾಗತಿಸುವಾಗ ಯುವಕನೊಬ್ಬ ಮಾರಣಾಂತಿಕ ಹೃದಯಾಘಾತಕ್ಕೆ ಒಳಗಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಅಮೆಜಾನ್ ಉದ್ಯೋಗಿಯಾಗಿರುವ ವಂಶಿ ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಪೆನುಮಡ ಗ್ರಾಮಕ್ಕೆ ತೆರಳಿದ್ದರು.
ವಧು-ವರರನ್ನು ಸ್ವಾಗತಿಸುವಾಗ ವಂಶಿಗೆ ಹೃದಯಾಘಾತ ಉಂಟಾಗಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ವಂಶಿ ವೇದಿಕೆಯಲ್ಲಿ ದಂಪತಿಗಳಿಗೆ ಉಡುಗೊರೆಯನ್ನು ನೀಡುವುದನ್ನು ನೋಡಬಹುದಾಗಿದೆ. ಕೆಲವು ಕ್ಷಣಗಳ ನಂತರ, ವರನು ಉಡುಗೊರೆಯನ್ನು ಬಿಚ್ಚುತ್ತಿದ್ದಂತೆ, ವಂಶಿ ತನ್ನ ಎಡಕ್ಕೆ ಬಾಗಿ ಕುಸಿದು ಬೀಳುತ್ತಿದ್ದಂತೆ ಸ್ನೇಹಿತರು ಆತನನ್ನು ಹಿಡಿದುಕೊಳ್ಳುತ್ತಾರೆ. ಕೂಡಲೇ ಸ್ನೇಹಿತರು ವಂಶಿಯನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಹೃದಯ ಸ್ತಂಭನದಿಂದ ಈಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.