ಉಡುಪಿ: ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಬಂದಿದ್ದ ಯುವಕನೊಬ್ಬ ಮಲ್ಪೆ ಬೀಚ್ ನಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರು ಮೂಲದ 21ರ ಹರೆಯದ ನಾಗೇಂದ್ರ ಮೃತಪಟ್ಟ ದುರ್ದೈವಿ.
ತನ್ನ ಐವರು ಸ್ನೇಹಿತರೊಂದಿಗೆ ನಾಗೇಂದ್ರ ಮಲ್ಪೆ ಬೀಚ್ ಗೆ ಬಂದಿದ್ದರು. ಈಜು ತಜ್ಞ ಈಶ್ವರ ಮಲ್ಪೆ ತಂಡ ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.