Sunday, March 23, 2025
Homeಮಂಗಳೂರುಮಹಿಳೆಗೆ ಚೀಟಿಯಲ್ಲಿ ಮೊಬೈಲ್ ನಂಬ‌ರ್ ನೀಡಿದ ಯುವಕ : ಮೋದಿ ರೋಡ್ ಶೋ ಬಳಿಕ ಫೈಟ್

ಮಹಿಳೆಗೆ ಚೀಟಿಯಲ್ಲಿ ಮೊಬೈಲ್ ನಂಬ‌ರ್ ನೀಡಿದ ಯುವಕ : ಮೋದಿ ರೋಡ್ ಶೋ ಬಳಿಕ ಫೈಟ್

ಮಂಗಳೂರು : ಪ್ರಧಾನಿ ಮೋದಿ ರೋಡ್ ಶೋ ಮುಗಿದ ಬಳಿಕ ಯುವಕರ ತಂಡದ ಮಧ್ಯೆ ವಾಗ್ವಾದ ನಡೆದು, ಹೊಯ್ ಕೈ ಹಂತಕ್ಕೆ ತಲುಪಿದ ಘಟನೆ ಬಂಟ್ಸ್ ಹಾಸ್ಟೆಲ್ ಬಳಿ ನಡೆದಿದೆ. ಮಹಿಳೆಯೊಬ್ಬರಿಗೆ ಮೊಬೈಲ್ ನಂಬರ್ ನೀಡಿದ ವಿಚಾರದಲ್ಲಿ ಗಲಾಟೆ ಸಂಭವಿಸಿದೆ ಎನ್ನಲಾಗಿದೆ.

ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಗೆ ಯುವಕನೊಬ್ಬ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದೆ. ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ಯುವಕ ಮಹಿಳೆಗೆ ನೀಡಿದ್ದ. ವಿಷಯ ತಿಳಿದು ಮಹಿಳೆಯ ಪತಿ ಯುವಕನಿಗೆ ಧರ್ಮದೇಟು ನೀಡಿದ್ದು, ಸ್ಥಳದಲ್ಲಿದ್ದ ಯುವಕರ ತಂಡದಿಂದಲೂ ಯುವಕನಿಗೆ ಗೂಸ ಬಿದ್ದಿದೆನ್ನಲಾಗಿದೆ.

ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದರು ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular