ವಾರದ ಹಿಂದೆ ಬಿಜೈ ನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯೋರ್ವಳು ಕಾರ್ಕಳದ ಯುವಕನ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.
ಬಿಜೈ ನಿವಾಸಿಯಾಗಿರುವ ಕೆಲಿಸ್ತಾ ಫೆರಾವೊ (18) ವರ್ಷದ ಯುವತಿ ಕಳೆದ ತಿಂಗಳು ಜುಲೈ 30 ರಂದು ತನ್ನ ಮನೆಯವರಲ್ಲಿ ಹೇಳದೆ ನಾಪತ್ತೆಯಾಗಿದ್ದಳು ಈ ಕುರಿತು ಮನೆಮಂದಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಲಿಲ್ಲ ಬಳಿಕ ಬರ್ಕೆ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿರುವ ಕುರಿತು ಪೋಷಕರು ದೂರು ನೀಡಿದ್ದರು.