ತೀರ್ಥಹಳ್ಳಿ : ತಾಲೂಕಿನ ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಸ್ಥಾನದ ಪಕ್ಕದ ಲಾಡ್ಜ್ ಒಂದರಲ್ಲಿ ಯುವತಿಯೊಬ್ಬಳ ಹತ್ಯೆಯಾಗಿದೆ. ಲಾಡ್ಜ್ ಕೋಣೆಯೊಳಗೆ ಅಂದಾಜು 30 ವರ್ಷದೊಳಗಿನ ಯುವತಿಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಲಾಡ್ಜ್ ನಂತೆ ಇರುವ ಮನೆಯಲ್ಲಿ 10 ರೂಮ್ ಗಳಿದ್ದು ಅದರಲ್ಲಿ ಸೋಮವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ಯುವಕ ಹಾಗೂ ಯುವತಿ ಬಂದು ಕೇಳಿದಾಗ ಬಾಡಿಗೆಗೆ ರೂಮನ್ನು ನೀಡಲಾಗಿದೆ.
ವಾಪಾಸ್ ಆಗುವಾಗ ಆ ವ್ಯಕ್ತಿ ಮಾತ್ರ ಹೋಗಿದ್ದಾನೆ. ಬುಧವಾರ ಸಂಜೆ ಕೆಲಸದವರು ನೋಡುವಾಗ ಹತ್ಯೆಯಾಗಿರುವುದು ತಿಳಿದು ಬಂದಿದೆ. ರೂಮನ್ನು ನೀಡುವಾಗ ಯಾವುದೇ ರೀತಿ ಸಂಬಂಧಪಟ್ಟ ದಾಖಲೆ ತೆಗೆದುಕೊಂಡಿಲ್ಲ ಎಂದು ಪೋಲೀಸರ ಬಳಿ ಕೆಲಸದವರು ಹೇಳುತ್ತಿದ್ದು ತೀರ್ಥಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಳೂರು ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.