ಯುವ ಲೇಖಕಿ ಹಾಗು ವಾಗ್ಮಿ ಕು. ರಿಶಲ್ ಫೆರ್ನಾಂಡಿಸ್ ಗೆ ದಿ ಅರ್ಥಸ್ ಆಫ್ ಇಂಡಿಯಾ ಹಾಗೂ ಡಿ ಆರ್ ಡಿ ಸಿ ಗ್ಲೋಬಲ್ ಕೌನ್ಸಿಲ್ ನವದೆಹಲಿ ಇವರು ಕು.ರಿಶಲ್ ಅವರ ಸಾಧನೆಗೆ ತಮ್ಮ ಪತ್ರಿಕೆ ಹಾಗೂ ಹೊಸ ವರ್ಷದ The Empowered Pen ಎಂಬ ಲೇಖಕರ ಪತ್ರಿಕೆಯಲ್ಲಿ ಮಂಗಳೂರಿನ ಯುವ ಲೇಖಕಿಯ ಸಾಧನೆಯನ್ನು ಚಿತ್ರೀಕರಿಸಿ ಅವರ ಸಾಧನೆಗೆ ಪ್ರೋತ್ಸಾಹವನ್ನು ನೀಡಿದ್ದಾರೆ
ಕು. ರಿಷೇಲ್ ಅವರು ಅಂತರಾಷ್ಟ್ರೀಯ ರಾಷ್ಟ್ರೀಯ ಹಾಗೂ ಇತರ ಮಟ್ಟದಲ್ಲಿ ಸಾಹಿತಿಕ ಸಾಧನೆಯನ್ನು ಮಾಡಿ ತಮ್ಮ 21ನೇ ವಯಸ್ಸಿನಲ್ಲಿ ಎರಡು ಪುಸ್ತಕಗಳನ್ನು ಬರೆದು ಸಾಧನೆ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಭಾರತ್ @ 2047 role of youth ಎಂಬ ಪುಸ್ತಕವನ್ನು ಬರೆದು ಇವರು ಈ ವಿಷಯದಲ್ಲಿ ಬರೆದ ಮೊದಲನೇ ಯುವ ಲೇಖಕಿಯಾಗಿ ಇವರ ಕಾರ್ಯ ಶ್ಲಾಘನೀಯ. ಈ ಪುಸ್ತಕ ವಾಯು ಸೇನೆಯಲ್ಲಿ ಸೇವೆಯನ್ನು ನೀಡಿದ ತಮ್ಮ ಅಜ್ಜನಿಗೆ ಅವರು ಸಮರ್ಪಿಸಿದ್ದಾರೆ.
ತಮ್ಮ ಸಾಹಿತಿಕ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅನೇಕ ಗಣ್ಯ ವ್ಯಕ್ತಿಗಳಿಗೆ ಪುಸ್ತಕಗಳನ್ನು ನೀಡಿ ಹಾಗೂ ಪ್ರಸ್ತುತಪಡಿಸಿ ಕೀರ್ತಿಯನ್ನು ಗಳಿಸಿದ್ದಾರೆ. ಪ್ರಮುಖವಾಗಿ ಭಾರತದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರು ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ.
The empowered Pen ಎಂಬ ಪತ್ರಿಕೆ ಇವರ ಆಲೋಚನಾತ್ಮಕ ಸಾಧನೆ ಹಾಗೂ ಸಮಾಜವನ್ನು ಮೂಡಿಸುವಂತಹ ಕಾರ್ಯ ಇರುವುದರಿಂದ ಇವರ ಸಾಧನೆಯನ್ನು ಈ ಪತ್ರಿಕೆಯಲ್ಲಿ ಚಿತ್ರೀಕರಿಸಿ ಇವರಿಗೆ ಅಭಿನಂದಿಸಿದ್ದಾರೆ.
ಇವರು ಶಿಕ್ಷಕರಾದ ಶ್ರೀ ರೋನಾಲ್ಡ್ ಮತ್ತು ನ್ಯಾನ್ಸಿ ದಂಪತಿಯ ಪುತ್ರಿ ಹಾಗು ಪ್ರಸ್ತುತ ಎಸ್ ಡಿ ಎಮ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದಾರೆ.