ಬಜ್ಪೆ: ಯುವ ವಾಹಿನಿ (ರಿ.) ಬಜಪೆ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ, ಬಜಪೆ-ಕರಂಬಾರು ಸಹಕಾರದೊಂದಿಗೆ ಜು.28ರಂದು ʻಆಟಿದ ನೆಂಪು ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆʼ ಕಾರ್ಯಕ್ರಮ ನಡೆಯಲಿದೆ. ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬೆಳಿಗ್ಗೆ 10ರಿಂದ ಕಾರ್ಯಕ್ರಮ ನಡೆಯಲಿದೆ.
ಸುಂಕದಕಟ್ಟೆ ನಿರಂಜನಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲತಾ ಆರ್. ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುವವಾಹಿನಿ ಬಜಪೆ ಘಟಕ ವತಿಯ ಅಧ್ಯಕ್ಷ ನಿರಂಜನ್ ಕರ್ಕೇರ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ, ಯೂ ಟ್ಯೂಬರ್, ಸ್ಟಾಂಡ್ ಅಪ್ ಕಾಮಿಡಿಯನ್ ಸಂದೇಶ್ ಕುಮಾರ್ ಬಡಗಬೆಳ್ಳೂರು ಆಟಿಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ.