ನವಿಮುಂಬಯಿ: ತುಳು ಕನ್ನಡ ವೆಲ್ಫೇರ್ ಎಸೋಸಿಯೇಶನ್ (ರಿ.) ಕಾಮೋಟೆ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಭಾರೀ ವಿಜೃಂಭಣೆಯಿಂದ ನಡೆಯಿತು. ಸರೋವರ್ ವ್ಯೂ ಬ್ಯಾಂಕ್ವೆಟ್ ಹಾಲ್ ಕಾಮೋಟೆಯಲ್ಲಿ ಸಂಸ್ಥೆಯ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ವಿಭಾಗದ ರೇಖಾ ಆಯಿಲ್ ಹಾಗೂ ನೃತ್ಯ ಗುರು ಸುನೀತಾ ಪೂಜಾರಿ ಸಹಕಾರದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತುಳುನಾಡಿನ ಪರಂಪರೆಯನ್ನು ನೆನಪಿಸುವಂತೆ ಅಲಂಕೃತವಾದ ವೇದಿಕೆಗೆ ಗಣ್ಯರೆಲ್ಲರೂ ಸೇರಿ ಆಟಿ ಕಳಂಜನನ್ನು ನೃತ್ಯದ ಮೂಲಕ ಬರಮಾಡಿಕೊಂಡರು. ಸಂಸ್ಥೆಯ ಮಹಿಳೆಯರು ತುಳುನಾಡಿನ ವಿವಿಧ ರೀತಿಯ ರುಚಿಕರವಾದ ತಿಂಡಿ-ತಿನಿಸುಗಳನ್ನು ಮಾಡಿ ತಂದು ತುಳುನಾಡಿನ ನೆನಪು ಹಸಿರಾಗುವಂತೆ ಮಾಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಗೌ. ಪ್ರ. ಕಾರ್ಯದರ್ಶಿ ಸುಧಾಕರ್ ಕೆಸ್ತೂರು ನಿರೂಪಿಸಿದರು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸುಜಿತ್ ಪೂಜಾರಿ ವಹಿಸಿದ್ದರು. ಕೇಂದ್ರ ಸಚಿವ ಶಂಕರ್ ಜಿ. ಗಯ್ಯಾರ್, ಕ್ರಾಂತಿಕಾರಿ ಯೂನಿಯನ್ ನ ಶ್ರೀಧರ ಎನ್. ಪೂಜಾರಿ, ಹಿಂದೂ ಪರಿಷತ್ತಿನ ಅಧ್ಯಕ್ಷ ಸಂಜೀವ ಶೆಟ್ಟಿ ಅಶ್ವಿತಾ, ನವಿಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ, ಬಿಲ್ಲವರ ಎಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಪೂಜಾರಿ, ಕನ್ನಡಿಗ ಕಲಾವಿದರ ಪರಿಷತ್ತುವಿನ ತಾರಾ ಬಂಗೇರ, ದೇವಾಡಿಗ ಸಂಘ ನವಿಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸ್ವಪ್ನ ಮೊಯ್ಲಿ, ಶ್ರೀ ಅಯ್ಯಪ್ಪ ಸೇವಾ ಸಂಸ್ಥೆ ಕಾಂದ ಕಾಲೊನಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಸನ್ನಾ ಶೆಟ್ಟಿ, ತುಳು ಕನ್ನಡ ವೆಲೇರ್ ಎಸೋಸಿಯೇಶನ್ ಕಾಮೋಟೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಸುರೇಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೇಜಸ್ವಿನಿ ಎಸ್. ಪೂಜಾರಿ ಸ್ವಾಗತ ಭಾಷಣಗೈದರು.
ಪ್ರತಿಭಾ ಪುರಸ್ಕಾರದ ಅಂಗವಾಗಿ 7ನೇ ತರಗತಿಯ ತನಕದ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಮತ್ತು 10ನೇ ಮತ್ತು 12ನೇ ತರಗತಿಯಲ್ಲಿ ಶೇಕಡಾ 90 ರಿಂದ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ನೀಡಿ ಸನ್ಮಾನಿಸಲಾಯಿತು.
ಕೊನೆಗೆ ಸಂಸ್ಥೆಯ ಸದಸ್ಯರಲ್ಲಿ ʻಉಂದು ಸಂಸಾರ’ ಮತ್ತು ಸುಧಾಕರ್ ಕೆನ್ನೂರು ನಿರ್ದೇಶನದಲ್ಲಿ ‘ಮಾಮಿ ಮರ್ಮಲ್’ ಎಂಬ ಕಿರು ನಾಟಕ ಪ್ರಸ್ತುತ ಪಡಿಸಿದರು. ಭಕ್ತಿ ಸ್ವರ ಸಂಗಮ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕೆಸ್ತೂರು ಧನ್ಯವಾದ ಹೇಳಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.