ಶೈಕ್ಷಣಿಕವಾಗಿ ತೀರಾ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ಮತ್ತು ಅನಾರೋಗ್ಯ ಪಿಡಿತರಿಗೆ ಸಹಾಯಧನ ವಿತರಣೆ
ಮುಲ್ಕಿ: ಮಕ್ಕಳಿಗೆ ಬಾಲ್ಯದಿಂದಲೇ ಶ್ರೀ ರಾಮನ ನಡೆ ಮತ್ತು ಶ್ರೀ ಕೃಷ್ಣನ ನುಡಿ ತಿಳಿಸಿದಾಗ ಅವರು ಸಾಧನಶೀಲರಾಗಿ ದೇಶದ ಆಸ್ತಿಯಾಗಲು ಸಾಧ್ಯವಾಗುತ್ತದೆ ಎಂದು ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ ಸಂಶೋಧನಾ ಪ್ರಾಧ್ಯಾಪಕರಾದ ಡಾ. ಸೊಂದ ಭಾಸ್ಕರ್ ಭಟ್ ನುಡಿದರು ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಮತ್ತು ಹಿಂಧು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಇದರ 22 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗಣೇಶಪುರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಜರುಗಿದ ಮೊಸರು ಕುಡಿಕೆ ಉತ್ಸವದ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬಿಜೇಶ್ ಚೌಟ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮಂಗಳೂರು ಸೇವೆ ಲೈಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್,ಗಣೇಶಪುರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೆಂದ್ರ ಗಣೇಶಪುರ, ಉದ್ಯಮಿ ರಮಾನಾಥ ಶೆಟ್ಟಿ ಗುರುನಗರ, ಚಿತ್ರಾಪುರ ಮನೋಜ್ ಕುಮಾರ್ ಅಸೋಸಿಯೇಟ್ ಮಾಲಕ ಮನೋಜ್ ಕುಮಾರ್, ವಿಶ್ವ ಹಿಂದು ಪರಿಷತ್ ಸುರತ್ಕಲ್ ನಗರ ಅಧ್ಯಕ್ಷ ಭಾಸ್ಕರ್ ರಾವ್ ಬಾಳ, ರಾವ್ ಬ್ರದರ್ಸ್ ಕ್ಯಾಟರರ್ಸ್ ಮಾಲಕ ಗುರುರಾಜ್ ರಾವ್ ಬಾಳ, ಜೆ ಎಸ್ ಡಬ್ಲು ಕಂಪೆನಿ ನಿವೃತ್ತ ಸೀನಿಯರ್ ಮ್ಯಾನೇಜರ್ ಹರೀಶ್ ಕುಮಾರ್ ಕಣ್ವತೀರ್ಥ, ಹಳೆಯಂಗಡಿ ಜೈ ಗಣೇಶ್ ಇಂಜಿನಿಯರ್ ವರ್ಕ ಮಾಲಕ ರಾಜೇಶ್ ಶೆಟ್ಟಿಗಾರ್, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಅಧ್ಯಕ್ಷ ಜಯಕುಮಾರ್, ಹಿಂಧು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕೋಶಾಧಿಕಾರಿ ಪುಷ್ಷರಾಜ್ ಕಣ್ವತೀರ್ಥ, ನಿಕಟಪೂರ್ವಧ್ಯಕ್ಷ ವಾದಿರಾಜ್ ರಾವ್, ಆರ್ಥಿಕ ಸಮಿತಿ ಸಂಚಾಲಕ ಮನೋಹರ ಶೆಟ್ಟಿ ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ ವಹಿಸಿದ್ದರು ಹಿಂಧು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿ ಕಾರ್ಯದರ್ಶಿ ಭರತ್ ಕುತ್ತೆತ್ತೂರು ಧನ್ಯವಾದ ಸಮರ್ಪಿಸಿದರು ರಾಕೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ತೀರಾ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ಮತ್ತು ಅನಾರೋಗ್ಯ ಪಿಡಿತರಿಗೆ ಸಹಾಯಧನ ವಿತರಿಸಲಾಯಿತು.