ಮಂಗಳೂರು: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹಳೆಯಂಗಡಿ, ಕಿನ್ನಿಗೋಳಿ ಪೇಟೆ ಮತ್ತು ಮೂಡುಬಿದಿರೆ ಪೇಟೆಯ ಬೀದಿಗಳಲ್ಲಿ ಚೌಟ ಮತಯಾಚಿಸಿದರು.
ಸಂಜೆಯ ವೇಳೆಗೆ ಮೂಡುಬಿದಿರೆ ಪೇಟೆಯಲ್ಲಿ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ ಚೌಟ, ಮತದಾರರಿಗೆ ಕೈಕುಲುಕಿ ಮೋದಿಗೆ ಮತ ನೀಡುವಂತೆ ಕೋರಿದ್ದಾರೆ. ಪ್ರತಿ ಅಂಗಡಿ, ಮಳಿಗೆಗಳಲ್ಲಿ ಅವರು ಮತ ಯಾಚಿಸಿದರು.
ನಂತರ ಬೆಳುವಾಯಿ ನಡ್ಡೋಡಿ ಬ್ರಹ್ಮಕಲಶ ನಡೆಯುವಲ್ಲಿಗೆ, ಶಿರ್ತಾಡಿ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿದರು.
ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್, ಪಕ್ಷದ ಪ್ರಮುಖರು, ಕಾರ್ಯಕರ್ತರು ಜೊತೆಗಿದ್ದರು.