Saturday, July 20, 2024
Homeಅಪಘಾತಭೀಕರ ಅಪಘಾತ | ಕಾರು ಡಿವೈಡರ್‌ಗೆ ಬಡಿದು ಬೆಳ್ತಂಗಡಿ ಪ್ರಜ್ವಲ್‌ ಕಾಂಪ್ಲೆಕ್ಸ್‌ ಮಾಲೀಕರ ಪುತ್ರ ಪ್ರಜ್ವಲ್‌...

ಭೀಕರ ಅಪಘಾತ | ಕಾರು ಡಿವೈಡರ್‌ಗೆ ಬಡಿದು ಬೆಳ್ತಂಗಡಿ ಪ್ರಜ್ವಲ್‌ ಕಾಂಪ್ಲೆಕ್ಸ್‌ ಮಾಲೀಕರ ಪುತ್ರ ಪ್ರಜ್ವಲ್‌ ನಿಧನ

ಬೆಳ್ತಂಗಡಿ: ಉಜಿರೆ ಕಾಲೇಜು ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ಪ್ರಜ್ವಲ್‌ ಕಾಂಪ್ಲೆಕ್ಸ್‌ ಮಾಲೀಕರ ಪುತ್ರ ಪ್ರಜ್ವಲ್‌ ನಾಯಕ್‌ (35) ಸಾವನ್ನಪ್ಪಿದ್ದಾರೆ. ಮುಂಜಾನೆ ಸುಮಾರು 4 ಗಂಟೆಗೆ ಕಾಲೇಜು ರಸ್ತೆಯಿಂದ ಬೆಳ್ತಂಗಡಿಗೆ ಸಾಗುವಾಗ ರಸ್ತೆ ಮಧ್ಯದ ಡಿವೈಡರ್‌ನ ಬೀದಿ ದೀಪದ ಕಂಬಳಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಮುಂಭಾಗ ನಜ್ಜುಗುಜ್ಜಾಗಿದೆ. ಅಲ್ಲದೆ ವಿದ್ಯುತ್‌ ಕಂಬವೊಂದು ಬುಡ ಸಮೇತ ಕಿತ್ತು ಬಿದ್ದಿದೆ. ತಕ್ಷಣವೇ ಪ್ರಜ್ವಲ್‌ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಅಪಘಾತದ ತೀವ್ರತೆಗೆ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ಬೆಳ್ತಂಗಡಿಯ ಹೆಸರಾಂತ ಉದ್ಯಮಿ, ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪ್ರಜ್ವಲ್‌ ಕಾಂಪ್ಲೆಕ್ಸ್‌ ಮಾಲೀಕ ಪ್ರಮೋದ್‌ ಆರ್.‌ ನಾಯಕ್‌ ಅವರ ಪುತ್ರರಾಗಿರುವ ಪ್ರಜ್ವಲ್‌ ನಾಯಕ್‌ ಉಜಿರೆಯ ಡಿಎಂ ಗೌಡ ಕಾಂಪ್ಲೆಕ್ಸ್‌ನಲ್ಲಿ ಗೇಮಿಂಗ್‌ ಶಾಪ್‌ ಮಾಲೀಕರಾಗಿದ್ದರು.

RELATED ARTICLES
- Advertisment -
Google search engine

Most Popular