ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿ ಕಾರಿಗೆ ಡಿಕ್ಕಿ ಹೊಡೆದು ಇನ್ನೊಂದು ಕಾರು ಸ್ಥಳದಿಂದ ಪರಾರಿಯಾಗಿದ್ದು ಅಪಘಾತಕ್ಕೀಡಾದ ಕಾರಿನಲ್ಲಿದ್ದವರು ಪವಾಡಸದೃಶ ಫಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕಡೆಯಿಂದ ಬಂಟ್ವಾಳದ ಪಜೀರು ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರಿಗೆ ಅದೇ ದಿಕ್ಕಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ನೆಕ್ಸಾ ಕಾರು ಅದರ ಚಾಲಕ ಓವರ್ಟೇಕ್ ಮಾಡುವ ರಭಸದಲ್ಲಿ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ.
ಅಪಘಾತದ ರಭಸಕ್ಕೆ ಸ್ವಿಫ್ಟ್ ಕಾರಿನ ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಮೇಲೇರಿ ಉಡುಪಿ ಕಡೆಗೆ ಮುಖ ಮಾಡಿ ನಿಂತಿದ್ದು ಕಾರಿನಲ್ಲಿದ್ದವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಹೆದ್ದಾರಿ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ಬಳಿಕ ಅಪಘಾತಕ್ಕೆೀಡಾದ ಕಾರನ್ನು ತೆರೆವುಗೊಳಿಸಲಾಯಿತು.