ಬೈಕ್‌ಗಳ ನಡುವೆ ಅಪಘಾತವೊಂದು ಸಂಭವಿಸಿದ ಪರಿಣಾಮ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿದ್ದು, ಕಾಣಿಯೂರು ಸಮೀಪದ ಬರೆಪ್ಪಾಡಿಯಲ್ಲಿ ನಡೆದಿದೆ.
ಬರೆಪ್ಪಾಡಿ ನಿವಾಸಿ ನಾರಾಯಣ ಭಟ್ ಎಂಬುವವರ ಪತ್ನಿ ವೈಶಾಲಿ (40) ಎಂಬುವವರೇ ಮೃತ ಮಹಿಳೆ.
ವೈಶಾಲಿ ಅವರು ತನ್ನ ಮನೆಯಿಂದ ಹಾಲಿನ ಡೈರಿಗೆಂದು ಹಾಲು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ಗಳ ಮಧ್ಯೆ ಅಪಘಾತವಾಗಿದೆ. ಒಂದು ಬೈಕ್ ರಸ್ತೆಯ ಬದಿಯಲ್ಲಿ ನಡೆದುಕೊಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅಪಘಾತದ ರಭಸಕ್ಕೆ ಪಾದಾಚಾರಿ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ಕುರಿತು ಮಹಿಳೆಯ ಪತಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.