Monday, July 15, 2024
HomeUncategorizedಲಾರಿಗಳು ಡಿಕ್ಕಿ: ಪಕ್ಕದ ಮಾರ್ಬಲ್ ಅಂಗಡಿಗೆ ನುಗ್ಗಿದ ಲಾರಿ

ಲಾರಿಗಳು ಡಿಕ್ಕಿ: ಪಕ್ಕದ ಮಾರ್ಬಲ್ ಅಂಗಡಿಗೆ ನುಗ್ಗಿದ ಲಾರಿ

ಸುರತ್ಕಲ್: ಇಲ್ಲಿನ ಬೈಕಂಪಾಡಿ ದ್ವಾರ ಹೋಟೆಲ್ ಬಳಿ ಲಾರಿಗಳೆರಡು ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಮಾರ್ಬಲ್ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ನಡೆದಿದೆ. ಅಪಘಾತದಲ್ಲಿ ಮೀನು ಸಾಗಾಟದ ಲಾರಿ ಚಾಲಕ ನೌಫಲ್ ಗಾಯಗೊಂಡಿದ್ದಾರೆ. ಲಾರಿಯೊಳಗೆ ಸಿಲುಕಿದ ಅವರನ್ನು ಸಾರ್ವಜನಿಕರು ಹೊರತೆಗೆದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿಗೆ ಸಂಚರಿಸುತ್ತಿದ್ದ ಲಾರಿಗೆ ಮೀನು ಸಾಗಾಟದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಗಣೇಶ್ ಮಾರ್ಬಲ್ ನ ಲಕ್ಷಾಂತರ ರೂ. ಮೌಲ್ಯದ ಮಾರ್ಬಲ್ ಗಳು ತುಂಡಾಗಿವೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular