Wednesday, October 9, 2024
Homeಅಪಘಾತಭೀಕರ ಅಪಘಾತ | ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ; 13 ಮಂದಿಯ ದುರ್ಮರಣ

ಭೀಕರ ಅಪಘಾತ | ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ; 13 ಮಂದಿಯ ದುರ್ಮರಣ

ಹಾವೇರಿ: ಟಿಟಿ ವಾಹನವೊಂದು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ. ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.
ಮೃತರನ್ನು ನಿದ್ದಪ್ಪ (45), ಶರಣು (40), ಯಲ್ಲಪ್ಪ (50), ನಾಗೇಶ್ (40), ನಾಗೇಶ್ (18) ಯಲ್ಲಪ್ಪ (65), ಗಣೇಶಪ್ಪ (65), ರಂಗನಾಥ ಸ್ವಾಮಿ (62) ಮತ್ತು ಇವರ 6 ಮತ್ತು 4 ವರ್ಷದ ಇಬ್ಬರು ಮಕ್ಕಳು, ಚಾಲಕ ನಾಗೇಶ್ (23), ಶರಣಪ್ಪ (24), ಪರಶುರಾಮ್ (40), ಮಂಜುಳಾ ರಾಮಕೃಷ್ಣ (50) ಎಂದು ಗುರುತಿಸಲಾಗಿದೆ. ‌
ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂಡು ಸ್ವಗ್ರಾಮಕ್ಕೆ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ.

ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಹಿಂದಿನಿಂದ ಗುದ್ದಿದೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿವೆ. ವಾಹನದಲ್ಲಿ ಮೃತದೇಹಗಳ ಅಪ್ಪಚ್ಚಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳನ್ನು ತೆಗೆಯಲು ಹರಸಾಹಸ ಪಟ್ಟಿದ್ದಾರೆ. ದುರ್ಘಟನೆಯಲ್ಲಿ ಮೂವರನ್ನು ರಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular