ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಟೂರಿಸ್ಟ್ ಬಸ್ಸೊಂದು ಇಲ್ಲಿನ ಉಪ್ಪೂರು ಸೇತುವೆಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಉಪ್ಪೂರಿನ ಕೆ.ಜಿ. ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಟೂರಿಸ್ಟ್ ಬಸ್ಸು ಉಡುಪಿಯಿಂದ ಕುಂದಾಪುರ ಕಡೆಗೆ ಚಲಿಸುತ್ತಿತ್ತು. ಉಪ್ಪೂರು ಸೇತುವೆ ಮೇಲೆ ಚಲಿಸುವಾಗ ತಾಂತ್ರಿಕ ದೋಷದಿಂದ ವಾಹನದ ಸ್ಟೇರಿಂಗ್ ಲಾಕ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ಹೀಗಾಗಿ ಬಸ್ಸು ಸೇತುವೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಸೇತುವೆಯ ಸುರಕ್ಷತಾ ಗೋಡೆಗೆ ಹಾನಿಯಾಗಿದೆ. ಸೇತುವೆಯ ಕೆಳಗೆ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.