ಕಡಂದಲೆ: ಮೂಡುಬಿದಿರೆ ಸಮೀಪದ ಬಿ.ಟಿ.ರೋಡ್ ಕಡಂದಲೆಯ ಶ್ರೀದೇವಿ ನಿವಾಸ ಮನೆ ವಠಾರದಲ್ಲಿ ಡಿ. 23ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ʻʻಶ್ರೀ ಸಂಪೂರ್ಣ ದೇವಿ ಮಹಾತ್ಮೆʼʼ ಎಂಬ ಪುಣ್ಯ ಕಥಾಭಾಗ ಬಯಲಾಟ ನಡೆಯಲಿದೆ.
ಅಂದು ಸಂಜೆ ಗಂಟೆ 6-00ಕ್ಕೆ ಸರಿಯಾಗಿ ಬಯಲಾಟ ನಡೆಯಲಿದೆ. ಅಲ್ಲದೆ, ಸಂಜೆ ಗಂಟೆ 5-00ಕ್ಕೆ ಚೌಕಿ ಪೂಜೆ ಮತ್ತು ರಾತ್ರಿ ಗಂಟೆ 8-00ಕ್ಕೆ ಅನ್ನಸಂತರ್ಪಣೆ ಜರಗಲಿರುವುದು. ಆದ್ದರಿಂದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿಮಲಾ ಮತ್ತು ಮೋಹನ ಗೌಡ ಶ್ರೀದೇವಿ ನಿವಾಸ, ಬಿ.ಟಿ ರೋಡ್, ಕಡಂದಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಡಂದಲೆ: ಡಿ. 23ರಂದು ಶ್ರೀ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
RELATED ARTICLES