ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಮತ್ತು ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳು ಕಾರ್ಕಳ ಇವರ ಸಹಯೋಗದೊಂದಿಗೆ 2024-25 ರ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಾದ 4ನೇ ತರಗತಿಯ ಪ್ರಾರ್ಥನ ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ. 8ನೇ ತರಗತಿಯ ಶ್ರಾವಣಿ ಸಂಸ್ಕೃತ ಭಾಷಣದಲ್ಲಿ ಪ್ರಥಮ ಸ್ಥಾನ, ದೀಕ್ಷಾ ಹಿಂದಿ ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ 10ನೇ ತರಗತಿಯ ಧನ್ಯ, ಅವಿನ್ಯಾ, ಪ್ರಣಮ್ಯ ಗೀತವೈಷ್ಣವಿ, ತನಿಷಾ, ಅಲೋಕ್, ಶ್ರೇಯಸ್, ಸುಹಾನ್, ಪ್ರಥ್ವಿಶ್, ಸೃಜನ್ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮತ್ತು 4ನೇ ತರಗತಿಯ ದನ್ವಿ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ, 8ನೇ ತರಗತಿಯ ಶ್ರಾವಣಿ ಭಗವದ್ಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.