Saturday, July 20, 2024
Homeಧಾರ್ಮಿಕಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು: ಅಶೋಕ್ ಕುಮಾರ್ ರೈ ಸೂಚನೆ

ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು: ಅಶೋಕ್ ಕುಮಾರ್ ರೈ ಸೂಚನೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಎ.10ರಿಂದ 20ರವರೆಗೆ ನಡೆಯುವ ದೇವರ ಜಾತ್ರೆಯನ್ನು ಪೂರ್ವ ಪದ್ಧತಿಯಂತೆ ವ್ಯವಸ್ಥಿತವಾಗಿ ನಡೆಸಬೇಕು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಮೂಲಭೂತ ಸೌಕರ್ಯ ಒದಗಿಸಲು ದೇವಾಲಯದ ಆಡಳಿತ ಕಚೇರಿಯಲ್ಲಿ ನಡೆದ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೇಟೆ ಸವಾರಿ ಸಂದರ್ಭ ಪ್ರತೀದಿನ ರಾತ್ರಿ 8.30ರವರೆಗೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಫಲಾಹಾರ ವ್ಯವಸ್ಥೆ ಮಾಡಬೇಕು. ತುಲಾಭಾರ ಸೇವೆ ಮಾಡುವ ಭಕ್ತರಿಗೆ ಉತ್ತಮ ರೀತಿಯಲ್ಲಿ ಸೇವೆ ಮಾಡಿಸಬೇಕು ಎಂದು ಶಾಸಕರು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು. ಭಕ್ತಾದಿಗಳಿಗೆ ದೇವರನ್ನು ನೋಡಲು ಸರಿಯಾಗಿ ವ್ಯವಸ್ಥೆ ಮಾಡಬೇಕು. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾದ ಶೌಚಾಲಯ, ನೀರಿನ ವ್ಯವಸ್ಥೆ ಮಾಡಬೇಕು. ಒಟ್ಟು ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುವ ಹಾಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.

ಪ್ರಸಾದದಲ್ಲಿ ಗುಣಮಟ್ಟ ಇರಬೇಕು : ದೇವಾಲಯದಲ್ಲಿ ಸೇವೆ ಮಾಡಿಸಿದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುವ ಬಾಳೆಹಣ್ಣು ಉತ್ತಮ ಗುಣಮಟ್ಟದಲ್ಲಿರಬೇಕು. ಕಪ್ಪಾದ ಬಾಳೆಹಣ್ಣು ನೀಡಬಾರದೆಂದ ಶಾಸಕರು, ದೇವಾಲಯಕ್ಕೆ ಬಾಳೆಹಣ್ಣು ಪೂರೈಕೆ ಮಾಡುವವರಿಗೆ ಇದರ ಬಗ್ಗೆ ತಿಳಿಸುವಂತೆ ಹೇಳಿದರು. ಅಪ್ಪ ಕಜ್ಜಾಯದಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಸೇವೆ ಮಾಡಿದ ಭಕ್ತಾದಿಗಳಿಗೆ ಸಮಾಧಾನವಾಗ ಬೇಕು. ದೇವರ ಅಭಿಷೇಕಕ್ಕೆ ಎಳನೀರು ತರುವಾಗ ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ಸಂಚಾರ ಶಾ ಎಸ್‌.ಐ ಶಾಹೀದ್ ಅಫ್ರಿದ್, ಆ‌ರ್ ಐ ಗೋಪಾಲ್, ಕೆಎಸ್‌ಆರ್ಟಿಸಿ ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ ಜಾತ್ರೋತ್ಸವ ಸಂದರ್ಭದಲ್ಲಿ ಕೈಗೊಳ್ಳುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ದೇಗುಲದ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಜಾತ್ರೆ ನಡೆಯುವ ರೀತಿಯ ಮಾಹಿತಿ ತಿಳಿಸಿದರು. ಆಡಳಿತಾಧಿಕಾರಿ ಎಚ್.ವಿ. ಇಬ್ರಾಹಿಂಪುರ್ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular