ಬೆಂಗಳೂರು: ನಟ ದ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ ಪೂಜಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ದ್ರುವ ಸರ್ಜಾರ ಮ್ಯಾನೇಜರ್ ಅಶ್ವಿನ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ ಪೂಜಾರಿ ಮೇಲೆ ನಡೆದ ಹಲ್ಲೆ ಪ್ರಕರಣದ ಮಾಸ್ಟರ್ ಮೈಂಡ್ ದ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬುದು ತಿಳಿದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ.
ಮೇ 26ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಎನ್ನುವವರು ಹಲ್ಲೆ ಮಾಡಿದ್ದರು. ಆದರೆ ಹಲ್ಲೆ ಮಾಡಿಸಿದ್ದ ದ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಆದರೆ, ನಾಗೇಂದ್ರನಿಗೆ ಸಾಥ್ ಕೊಟ್ಟಿದ್ದು ಮ್ಯಾನೇಜರ್ ಅಶ್ವಿನ್ ಎಂಬುದು ಗೊತ್ತಾಗಿದೆ.
ಕಳೆದ ವರ್ಷ ಅಶ್ವಿನ್ ಬರ್ತ್ಡೇಗೆ ದ್ರುವ ಸರ್ಜಾ ದುಬಾರಿ ಫಾರ್ಚ್ಯೂನರ್ ಕಾರ್ ಕೂಡ ಗಿಫ್ಟಾಗಿ ನೀಡಿದ್ದರು. ದ್ರುವ ಸರ್ಜಾಗೆ ಅಶ್ವಿನ್ ಅಷ್ಟು ಅತ್ಯಾಪ್ತರಾಗಿದ್ದರು. ಆದರೆ ಯಾವಾಗ ದ್ರುವ ಸರ್ಜಾ ಜೊತೆ ಪ್ರಶಾಂತ್ ಪೂಜಾರಿ ತುಂಬಾ ಕ್ಲೋಸ್ ಆಗತೊಡಗಿನೊ, ಅದನ್ನು ಸಹಿಸಿಕೊಳ್ಳಲಾಗದ ಅಶ್ವಿನ್ ಈ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
